ನ್ಯೂಸ್ ನಾಟೌಟ್: ಕಲ್ಲುಗುಂಡಿಯ ಕೆನರಾ ಬ್ಯಾಂಕ್ ಪಾರ್ಕಿಂಗ್ ಗ್ರೌಂಡ್ ನಲ್ಲಿ ನಡೆದ ನ್ಯೂ ಇಯರ್ ಲಕ್ಕಿ ಕೂಪನ್ 2025ರ ಡ್ರಾ ಕಾರ್ಯಕ್ರಮದಲ್ಲಿ ಮೂರು ಮಂದಿ ಅದೃಷ್ಟಶಾಲಿಗಳಿಗೆ ಬಹುಮಾನಗಳು ಒಲಿದಿವೆ.
ಹಣಕಾಸಿನ ತೊಂದರೆಯಿಂದಾಗಿ ಮಡಿಕೇರಿ ತಾಲೂಕಿನ ಸಂಪಾಜೆಯ ಚಟ್ಟೆಕಲ್ಲಿನಲ್ಲಿ ಇದ್ದ 2 ಎಕರೆ ಭೂಮಿಯನ್ನು ಲಕ್ಕಿ ಕೂಪನ್ ಮೂಲಕ ಮಾರಾಟ ಮಾಡಿ ಬ್ಯಾಂಕ್ ಸಾಲವನ್ನು ತೀರಿಸಲು ಜಾನ್ಸಿ ಮತ್ತವರ ಮಗ ನಿರ್ಧರಿಸಿದ್ದರು. ಅದರಂತೆ ಹಲವು ಅಡೆತಡೆಗಳನ್ನು ಮೀರಿ ಇಂದು (ಮಾರ್ಚ್ 30) ರಂದು ಲಕ್ಕಿ ಡ್ರಾ ಕಾರ್ಯಕ್ರಮ ನಡೆದಿದೆ.
ಅದರಲ್ಲಿ ಪ್ರಥಮ ಬಹುಮಾನ 2 ಎಕ್ರೆ ಜಾಗ ಇಷಿಕಾ ಉಳ್ಳಾಲ (Ishika Ullala) ಟಿಕೇಟ್ ಸಂಖ್ಯೆ: 18994 ಎಂಬವರಿಗೆ ಒಲಿದಿದೆ. ದ್ವಿತೀಯ ಬಹುಮಾನ Rs. 4,00,000 ಕಡಬ ತಾಲೂಕಿನ ಹಿಬಾ ಫಾತಿಮಾ(Hiba Fathima) ಟಿಕೇಟ್ ಸಂಖ್ಯೆ: 11106 ಎಂಬವರಿಗೆ ದೊರಕಿದೆ. ತೃತೀಯ ಬಹುಮಾನ Rs. 2,00,000 ಮಡಿಕೇರಿಯ ಬಿನ್ನು ಜಾರ್ಜ್ (Binnu George) ಟಿಕೇಟ್ ಸಂಖ್ಯೆ 01406 ಅವರಿಗೆ ಸಿಕ್ಕಿರುತ್ತದೆ.
ತೃತೀಯ ಬಹುಮಾನ ವಿಜೇತರಾದ ಬಿನ್ನು ಜಾರ್ಜ್ ತಮ್ಮ ಬಹುಮಾನದ 2ಲಕ್ಷ ರೂಪಾಯಿ ಮೊತ್ತವನ್ನು ಜಾನ್ಸಿಯವರ ಕುಟುಂಬಕ್ಕೆ ಹಿಂತಿರುಗಿಸಿ ಮಾನವೀಯತೆ ಮೆರೆದಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯ ರಾಜ್ಯ ಸದಸ್ಯ ಕೆ.ಪಿ ಜಾನಿ, ಸಂಪಾಜೆ ಗ್ರಾಮ ಪಂಚಾಯತ್ ನ ಸದಸ್ಯರಾದ ಶವ್ವಾದ್ ಗೂನಡ್ಕ, ನಿವೃತ ಅಧ್ಯಾಪಕ ಚಿದಾನಂದ ಮಾಸ್ಟರ್ ಉಪಸ್ಥಿತರಿದ್ದರು. ಲೂಕಾಸ್ ಟಿ.ಐ ಕಾರ್ಯಕ್ರಮ ನಿರೂಪಿಸಿದರು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಸುಳ್ಯದ ‘ನ್ಯೂಸ್ ಟಾಟೌಟ್’ ಚಾನೆಲ್ ಮೂಲಕ ನೇರಪ್ರಸಾರ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೀಡಿದ ಲೈವ್ ಲಿಂಕ್ ಅನ್ನು ವೀಕ್ಷಿಸಬಹುದಾಗಿದೆ…