Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಸಾಂಬಾದಲ್ಲಿ 7 ಮಂದಿ ಜೈಶ್‌ ಉಗ್ರರನ್ನು ಹತ್ಯೆ ಮಾಡಿದ ಬಿಎಸ್‌ ಎಫ್‌ ಯೋಧರು..! ಚೀನಾ ನಿರ್ಮಿತ ಕ್ಷಿಪಣಿಯ ಅವಶೇಷ ಪತ್ತೆ..!

639

ನ್ಯೂಸ್ ನಾಟೌಟ್: ಅಕ್ರಮವಾಗಿ ಭಾರತಕ್ಕೆ ನುಸುಳುತ್ತಿದ್ದ ಜೈಶ್-ಎ-ಮೊಹಮ್ಮದ್‌ ಸಂಘಟನೆಯ 7 ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ಸಾಂಭಾದಲ್ಲಿ (Samba) ಭಾರತದ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ.

ಗುರುವಾರ ಹಲವು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ (BSF) ವಿಫಲಗೊಳಿಸಿದೆ.

ಅಂತಾರಾಷ್ಟ್ರೀಯ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಬಿಎಸ್‌ಎಫ್‌ ಯೋಧರು ಗುಂಡಿಕ್ಕಿ ಕೊಂದಿದ್ದಾರೆ ಈ ಮಾಹಿತಿಯನ್ನು ಬಿಎಸ್‌ಎಫ್‌ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಪಾಕಿಸ್ತಾನದ ಕಡೆಯಿಂದ ಹಾರಿ ಬಂದ ಚೀನಾ ನಿರ್ಮಿತ ಕ್ಷಿಪಣಿಯ (Missile) ಅವಶೇಷವೊಂದು ಪಂಜಾಬ್‌ನ (Punjab) ಹೋಶಿಯಾರ್‌ಪುರ ಕವಾಯಿದೇವಿಯ ಬಳಿಯ ಫಾರೆಸ್ಟ್‌ನಲ್ಲಿ ಪತ್ತೆಯಾಗಿದೆ.

ಚೀನಾ ನಿರ್ಮಿತ PL-15 (PL-15 Missile) ಭಾರತದ ಭೂಭಾಗ ಪ್ರವೇಶಿಸಿದ್ದರೂ ಯಾವುದೇ ಅಪಾಯ ಉಂಟುಮಾಡಿಲ್ಲ. ಪಾಕ್‌ ಹಾರಿಸಿದ ಈ ಕ್ಷಿಪಣಿ ಆಟಿಕೆಯಂತೆ ಫೇಲ್ಯೂರ್‌ ಆಗಿ ನೆಲಕ್ಕೆ ಅಪ್ಪಳಿಸಿದೆ. ಹೀಗಾಗಿ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯ ಮೂಲಸೌಕರ್ಯದ ವಿಶ್ವಾಸಾರ್ಹತೆ ಮತ್ತೊಮ್ಮೆ ಬಟಾಬಯಲಾಗಿದೆ.

ಅರೇಬಿಯನ್ ಸಮುದ್ರದಲ್ಲಿ ಭಾರತದ ಯುದ್ಧ ನೌಕೆಗಳಿಂದ ಕಾರ್ಯಾಚರಣೆ..! ಪಾಕಿಸ್ತಾನದ ಕ್ಷಿಪಣಿ, ಡ್ರೋನ್ ದಾಳಿಗೆ ಭಾರತದಿಂದ ದೊಡ್ಡ ಪ್ರತೀಕಾರದ ಸೂಚನೆ..!

See also  ಸುಳ್ಯದ ಕಾವು ಬಳಿ ಟಿಟಿ ವ್ಯಾನ್ ಪಲ್ಟಿ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget