ಕ್ರೀಡೆ/ಸಿನಿಮಾವೈರಲ್ ನ್ಯೂಸ್ಸಿನಿಮಾ

ನಾನು ಮೋಸ ಮಾಡಿದ್ದೇನೆ ಎಂದು ಒಪ್ಪಿಕೊಂಡ ನಟ ನಾಗಜೈತನ್ಯ..! ಸಮಂತಾ ಸಂಬಂಧದ ಬಗ್ಗೆ ಹೇಳಿದ್ರಾ ನಟ..? ವ್ಯಾಪಕ ಟೀಕೆಗೆ ಗುರಿಯಾದ ಹೇಳಿಕೆ

225

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಚಿತ್ರದ ವಿಚಾರ ಹೊರತುಪಡಿಸಿ ಬೇರೆ ಕಾರಣಗಳಿಗೆ ಸುದ್ದಿಯಾಗುತ್ತಿರುವ ನಟ ನಾಗಚೈತನ್ಯ ಈಗ ಮತ್ತೊಂದು ವಿಚಾರಕ್ಕೆ ಸದ್ದು ಮಾಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಖಂಡನೆಗೆ ಗುರಿಯಾಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಚಲನಚಿತ್ರ ಒಂದರ ಪ್ರಮೋಷನ್​ನಲ್ಲಿ ತೊಡಗಿರುವ ನಟ ನಾಗಚೈತನ್ಯಗೆ ಸಂಬಂಧದ ಕುರಿತು ಪ್ರಶ್ನೆ ಒಂದು ಎದುರಾಗುತ್ತದೆ. ಈ ವೇಳೆ ಇದಕ್ಕೆ ಉತ್ತರಿಸುವ ನಾಗಚೈತನ್ಯ ಜೀವನದಲ್ಲಿ ಎಲ್ಲವನ್ನೂ ಅನುಭವಿಸಬೇಕಾಗುತ್ತದೆ.

ಸಂಬಂಧಗಳ ವಿಚಾರಕ್ಕೆ ಬರುವುದಾದರೆ ನಾನು ಮೋಸ ಮಾಡಿದ್ದೇನೆ. ನೀವು ಬೆಳೆದಾಗ ಮತ್ತು ಲೆಕ್ಕಾಚಾರ ಮಾಡುವಾಗ ಅದು ಸರಿ ಅನ್ನಿಸುತ್ತೆ, ನಾನು ಎಲ್ಲಾ ಅನುಭವಗಳನ್ನು ಹೊಂದಿದ್ದೇನೆ, ಈಗ ಅದಕ್ಕೆ ಉತ್ತರಿಸುವ ಸಮಯ ಬಂದಿದೆ ಎಂದು ನಟ ಬಹಿರಂಗವಾಗಿ ತಾವು ಮೋಸ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾರೆ. ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದ್ದು, ಅದಕ್ಕೆ ಈತ ಅರ್ಹವಾದದ್ದನ್ನು ಪಡೆದಿದ್ದಾನೆ ಎಂದು ಹೇಳುವ ಮೂಲಕ ಸಮಂತಾ ಜೊತೆಗಿನ ಬ್ರೇಕಪ್​ ಕುರಿತು ಮಾತನಾಡಿದ್ದಾರೆ.

ಕೆಲವರು ಇದು ಮದುವೆಗಿಂತ ಮುಂಚಿನ ವಿಡಿಯೋ ಈಗ ಬಳಸಿಕೊಳ್ಳಲಾಗುತ್ತಿದೆ ಎಂದು ಕಮೆಂಟ್​ ಹಾಕಿದ್ದಾರೆ. ಒಟ್ಟಿನಲ್ಲಿ ನಟ ನಾಗಚೈತನ್ಯ ಹೇಳಿಕೆಯ ವಿಡಿಯೋ ಸಿನಿ ಇಂಡಸ್ಟ್ರಿಯಲ್ಲಿ ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ನಟ ನಾಗಚೈತನ್ಯ ಕಳೆದ ಒಂದು ವರ್ಷದಿಂದ ಬಹುಭಾಷಾ ನಟಿ ಶೋಭಿತಾ ಧೂಳಿಪಾಲ ಅವರೊಂದಿಗೆ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಮುಂದಿನ ದಿನಗಳಲ್ಲಿ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗಿದೆ.

See also  ಇಸ್ಟಾಗ್ರಾಂ ನಲ್ಲಿ ಶುರುವಾದ ಕಮೆಂಟ್ ಕಾಳಗಕ್ಕೆ ಕಾರಿನಲ್ಲಿ ಗುದ್ದಿ ಹತ್ಯೆಗೆ ಯತ್ನ..! ಪ್ರಕರಣ ದಾಖಲು, ವಿಡಿಯೋ ವೈರಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget