ಕ್ರೀಡೆ/ಸಿನಿಮಾವಿಡಿಯೋವೈರಲ್ ನ್ಯೂಸ್

ಸಮಂತಾ ಬೆಡ್‌ರೂಮ್‌ ಸೀನ್‌ ವೈರಲ್‌..! ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್ : ವಿಡಿಯೋದಲ್ಲಿ, ವಿಜಯ್ ಮತ್ತು ಸಮಂತಾ ಬೆಡ್‌ರೂಮ್‌ ಸೀನ್‌ ಕಾಣಬಹುದು. ಈ ವಿಡಿಯೋ ಕ್ಲಿಪ್‌ ವಿಜಯ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಅವರ ಮುಂದಿನ ಕುಶಿ ರೊಮ್ಯಾಂಟಿಕ್ ಚಿತ್ರವಾಗಿದೆ. ಇದೀಗ ಈ ಸಿನಿಮಾದ ಹಾಡಿನ ಸಣ್ಣ ಕ್ಲಿಪ್ ಅನ್ನು ನಟ ವಿಜಯ್‌ ದೇವರಕೊಂಡ ಹಂಚಿಕೊಂಡಿದ್ದಾರೆ.

ಈ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ಆನ್-ಸ್ಕ್ರೀನ್ ಜೋಡಿ ಪ್ರೇಕ್ಷಕರನ್ನು ಆಕರ್ಷಿಸಿದೆ.
ತೆಲುಗು ಅವತರಣಿಕೆಯನ್ನು ಸಿದ್ ಶ್ರೀರಾಮ್ ಮತ್ತು ಚಿನ್ಮಯಿ ಶ್ರೀಪಾದರು ಹಾಡಿದ್ದಾರೆ. ಇದರಲ್ಲಿ ನವವಿವಾಹಿತ ದಂಪತಿಗಳ ಪ್ರಣಯ, ಪ್ರೀತಿ ಮತ್ತು ಕೆಮಿಸ್ಟ್ರಿಯನ್ನು ಚಿತ್ರಿಸಲಾಗಿದೆ. ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿಯಲ್ಲೂ ಈ ಹಾಡು ಬಿಡುಗಡೆಯಾಗಿದೆ. ಮಲಯಾಳಂನ ಹೃದಯಂ ಚಿತ್ರಕ್ಕೆ ಸಂಗೀತ ನೀಡಿರುವ ಸಂಗೀತ ನಿರ್ದೇಶಕ ಹಿಶಾಮ್ ಅಬ್ದುಲ್ ವಹಾಬ್ ಕುಶಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ ಎನ್ನಲಾಗಿದೆ.

ಕುಶಿ ತೆಲುಗು ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಕುಶಿ ಒಂದು ರೊಮ್ಯಾಂಟಿಕ್ ಡ್ರಾಮಾ ಎಂದು ಹೇಳಲಾಗಿದೆ. ಶಿವ ನಿರ್ವಾಣ ನಿರ್ದೇಶಿಸಿದ ಈ ಚಿತ್ರವು ಪ್ರೇಮಕಥೆಯ ಸುತ್ತ ಕಥೆ ಹೆಣೆಯಲಾಗಿದೆ.

Related posts

ಗಂಡನ ಮನೆಯಿಂದ ನಿಗೂಢವಾಗಿ ಆಕೆ ನಾಪತ್ತೆ..! 3 ವರ್ಷಗಳ ನಂತರ ಮಹಿಳೆ ಪ್ರಿಯಕರನ ಮನೆಯಲ್ಲಿ ಪತ್ತೆ..!

9 ದಿನಗಳಲ್ಲಿ ಭರ್ಜರಿ ದಾಖಲೆ ನಿರ್ಮಿಸಿದ “ದಿ ಕೇರಳ ಸ್ಟೋರಿ”! ವಿವಾದ ಸೃಷ್ಟಿಸಿದ್ದ ಚಿತ್ರದ ದೃಶ್ಯಗಳಿಗೆ ಕತ್ತರಿ!

ಒಡಿಶಾ ರೈಲು ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ? ಅದಾನಿ ಟ್ವೀಟ್ ನಲ್ಲಿರುವ ಅಸಲಿಯತ್ತೇನು?