ಕರಾವಳಿಸುಳ್ಯ

ಜೆಸಿಐ ಸುಳ್ಯ ಪಯಸ್ವಿನಿ ವತಿಯಿಂದ “ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಪುರಸ್ಕಾರ”,ತಾ. ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆಗೆ ಸನ್ಮಾನ

97

ನ್ಯೂಸ್‌ ನಾಟೌಟ್‌: ಜೆಸಿಐ ಸುಳ್ಯ ಪಯಸ್ವಿನಿಯು ಸುಳ್ಯ ಭಾಗದಲ್ಲಿ ಎಲೆ ಮರೆಯಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ ದಿ ಸೈಲೆಂಟ್ ಸ್ಟಾರ್ ಪುರಸ್ಕಾರವನ್ನು ನೀಡಿ ಗೌರವಿಸುತ್ತಿದೆ.ಈಗಾಗಲ್ಲೇ ಕೆಲವು ಮಂದಿ ಈ ಪುರಸ್ಕಾರಕ್ಕೆ ಭಾಜನರಾಗಿದ್ದು,ಅವರನ್ನು ಗುರುತಿಸಿ ಗೌರವಿಸಿದೆ.

ಇದೀಗ ಕಳೆದ 23 ವರುಷಗಳಿಂದ ಸುಳ್ಯದ ಮುಖ್ಯ ರಸ್ತೆಯಲ್ಲಿರುವ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ನಿಷ್ಟಾವಂತ ಸೇವೆಯನ್ನು ಸಲ್ಲಿಸುತ್ತಿರುವ ಮಹಿಳೆಯೊಬ್ಬರನ್ನು ಗುರುತಿಸಿ ಸನ್ಮಾನಿಸಿದೆ.ಸುಳ್ಯ ಹಳೆಗೇಟು ಹೊಸಗದ್ದೆ ನಿವಾಸಿ ಶ್ರೀಮತಿ ಭವಾನಿ ಇವರಿಗೆ ದಿ ಸೈಲೆಂಟ್ ಸ್ಟಾರ್ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು.

ಈ ವೇಳೆ ಉದ್ಯಮಿ ಸಾರಸ್ವತ ಕೆಫೆಯ ಮಾಲೀಕ ರಾಧಾಕೃಷ್ಣ ನಾಯಕ್ ಜಯನಗರ ಸನ್ಮಾನವನ್ನು ನೆರವೇರಿಸಿದರು.ಬಳಿಕ ಮಾತನಾಡಿ “ಜೆಸಿಐಯ ಇಂತಹ ಕಾರ್ಯಕ್ರಮ ಶ್ಲಾಘನೀಯವಾದುದು, ಸುಳ್ಯದಲ್ಲಿ ಎಲೆಮರೆ ಕಾಯಿಯಂತೆ ಇರುವ ಇನ್ನಷ್ಟು ಪ್ರತಿಭೆಗಳನ್ನು ಗುರುತಿಸಿ ಅವರಿಗೊಂದು ವೇದಿಕೆಯನ್ನು ಕಲ್ಪಿಸಿಕೊಡುವ ಕೆಲಸವಾಗಬೇಕಿದೆ. ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರು ಮತ್ತಷ್ಟು ಎತ್ತರಕ್ಕೆ ಬೆಳೆದು ಸಾಧನೆ ಮಾಡೋದಕ್ಕೆ ಅನುಕೂಲವಾಗುತ್ತದೆ.ಇದರಿಂದ ನಮ್ಮ ಸುಳ್ಯ ತಾಲೂಕಿನ ಜನರು ಹೆಮ್ಮೆ ಪಡುತ್ತಾರೆ” ಎಂದರು.

ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಪಯಸ್ವಿನಿ ಘಟಕಾಧ್ಯಕ್ಷ jc ಹೆಚ್ ಜಿ ಎಫ್ ಗುರುಪ್ರಸಾದ್ ನಾಯಕ್ ವಹಿಸಿದ್ದರು.ನಿಕಟಪೂರ್ವ ಅಧ್ಯಕ್ಷರಾದ ನವೀನ್ ಕುಮಾರ್‌ ಉಪಸ್ಥಿತರಿದ್ದರು. ಜೆಸಿ ರಂಜಿತ್ ಕುಕ್ಕೆಟ್ಟಿ,ಜೆಸಿ ಅಭಿಷೇಕ್ ಗುತ್ತಿಗಾರು,ಅಶ್ವಿನಿ ಚೆಂಬು,ಜೆಸಿ ರಕ್ಷಿತ್, ಮೋನಿತ್ ಕುಮಾರ್,ಲೋಕೆಶ್, ನಂದನ್ ಮಂಜುನಾಥ್ ಮತ್ತು ನಾಗರಿಕರು ಉಪಸ್ಥಿತರಿದ್ದರು.

See also  ಹಿಂದೂ ಯುವತಿಗೆ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ
  Ad Widget   Ad Widget   Ad Widget   Ad Widget   Ad Widget   Ad Widget