ಕ್ರೈಂರಾಜ್ಯವೈರಲ್ ನ್ಯೂಸ್ಸಿನಿಮಾ

ಸಲ್ಮಾನ್ ಖಾನ್‌ ಗೆ ಜೀವ ಬೆದರಿಕೆ ಹಾಕಿದ್ದ ರಾಯಚೂರಿನ ಯುವಕನ ಬಡ ಪೋಷಕರಿಗೆ ಸಂಕಷ್ಟ..! ಮುಂಬೈಗೆ ಬರುವಂತೆ ಪೋಷಕರಿಗೆ ಪೊಲೀಸರಿಂದ ಕರೆ..!

253

ನ್ಯೂಸ್ ನಾಟೌಟ್: ಬಾಲಿವುಡ್ ನಟ ಸಲ್ಮಾನ್ ಖಾನ್‌ ಗೆ ಜೀವ ಬೆದರಿಕೆ ಪ್ರಕರಣ ಹಿನ್ನೆಲೆ ರಾಯಚೂರಿನ ಮಾನ್ವಿಯಲ್ಲಿ ಮುಂಬೈ ಪೊಲೀಸರು ಆರೋಪಿ ಯುವಕನನ್ನ ಬಂಧಿಸಿ ಕರೆದೊಯ್ದಿದ್ದಾರೆ. ಮಾನ್ವಿಯಲ್ಲಿ ಟೈಯರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಸೋಹೆಲ್ ಪಾಷಾ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ನವೆಂಬರ್ 11ರಂದು ಆರೋಪಿಯನ್ನ ಬಂಧಿಸಿ ಮುಂಬೈಗೆ ಕರೆದೊಯ್ಯಲಾಗಿದೆ. ಮುಂಬೈ ವರ್ಲಿ ಪೊಲೀಸ್ ಠಾಣೆಯಿಂದ ಆರೋಪಿಯ ಪೋಷಕರಿಗೆ ಇಂದು(ನ.13) ಕರೆ ಬಂದಿದ್ದು, ವಿಚಾರಣೆಗೆ ಮುಂಬೈಗೆ ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಇದೀಗ ಮಗನ ಬಂಧನದಿಂದ ಬಡ ಕುಟುಂಬ ಕಣ್ಣೀರಿಡುತ್ತಿದೆ.

ಸಲ್ಮಾನ್ ಖಾನ್ ಅಪ್ಪಟ ಅಭಿಮಾನಿಯಾಗಿದ್ದ ಸೋಹೆಲ್ ಪಾಷಾ, ಬಹುಬೇಗ ಹೆಸರು ಮಾಡಲು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಲ್ಲಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಮುಂಬೈ ಟ್ರಾಫಿಕ್ ಪೊಲೀಸ್ ಸಹಾಯವಾಣಿ ವಾಟ್ಸ್ ಆಪ್ ನಂಬರ್‌ ಗೆ ನ.7ರಂದು ಕೊಲೆ ಬೆದರಿಕೆ ಮೆಸೇಜ್ ಮಾಡಿದ್ದ, 5 ಕೋಟಿ ಬೇಡಿಕೆ ಇಟ್ಟಿದ್ದ. ಬೇರೆಯವರ ಮೊಬೈಲ್ ನಂಬರ್ ಬಳಸಿ ವಾಟ್ಸ್ ಆಪ್ ಮೆಸೇಜ್ ಮಾಡಿದ್ದ ಸೋಹೆಲ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಮಗ ಮಾಡಿದ ತಪ್ಪಿಗೆ ಪೋಷಕರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ.

Click

https://newsnotout.com/2024/11/puttur-kambala-bettu-kananda-news-cctv/
https://newsnotout.com/2024/11/uppinangady-kadaba-taluk-kannada-news-house-in-govt-land/
https://newsnotout.com/2024/11/jammu-and-kashmir-kannada-news-5-2-earthquck-hd/
https://newsnotout.com/2024/11/sathish-sail-kannada-news-highcourt-bail-kannad-anews-jail-d/
See also  ಪ್ರಜ್ವಲ್ ರೇವಣ್ಣಗೆ ಮತ್ತಷ್ಟು ದಿನ ಜೈಲು, ಜಾಮೀನು ಅರ್ಜಿ ಮುಂದೂಡಿಕೆ..! ಇನ್ನೂ ವಿಚಾರಣೆ ಮುಗಿದಿಲ್ಲವೇಕೆ..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget