ನ್ಯೂಸ್ ನಾಟೌಟ್: ಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಟ್ರೈಜಿಮಿನಲ್ ನರಶೂಲೆ (Trigeminal Neuralgia) ಎಂಬ ಕಾಯಿಲೆ ನನಗಿದೆ ಎಂದು ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಶಾಕಿಂಗ್ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ.
59 ವರ್ಷದ ನಟ ಸಲ್ಮಾನ್ ಖಾನ್ ಮದುವೆಯಾಗದೇ ಸಿಂಗಲ್ ಆಗಿಯೇ ಉಳಿದಿರೋದಕ್ಕೆ ಇದೇ ಕಾರಣ ಆಯ್ತಾ ಎಂಬ ಚರ್ಚೆ ಶುರುವಾಗಿದೆ. ಸಲ್ಮಾನ್ ಖಾನ್ ದೈಹಿಕವಾಗಿ ಸದೃಢವಾಗಿ ಕಾಣಿಸಿಕೊಂಡರು, ಹಲವಾರು ಗಂಭೀರ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗೆ ʻದಿ ಗ್ರೇಟ್ ಇಂಡಿಯನ್ ಕಪಿಲ್ʼ ಶೋನಲ್ಲಿ ಮೊದಲು ಅತಿಥಿಯಾಗಿ ಭಾಗವಹಿಸಿದ ನಟ ಈ ವೇಳೆ ತಮ್ಮ ಮದುವೆ ಮತ್ತು ಆರೋಗ್ಯ ಸಮಸ್ಯೆಗಳ ಕುರಿತು ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಗಂಭೀರ ಕಾಯಿಲೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದೇನೆ. ಟ್ರೈಜಿಮಿನಲ್ ನರಶೂಲೆ (Trigeminal Neuralgia) ಎಂಬ ಕಾಯಿಲೆ ಇದೆ. ಅದರ ಹೊರತಾಗಿಯೂ ನಾನು ಕೆಲಸ ಮಾಡುತ್ತಿದ್ದೇನೆ ಎಂದು ಸಲ್ಮಾನ್ ಖಾನ್ ಹೇಳಿಕೊಂಡಿದ್ದಾರೆ. ಅಲ್ಲದೇ ನನಗೆ ಮೆದುಳಿನಲ್ಲಿ ರಕ್ತನಾಳ ಸಮಸ್ಯೆ ಇದೆ. ಅದಕ್ಕಾಗಿಯೂ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಎವಿಎಮ್ ಸಮಸ್ಯೆ ಕೂಡ ಇದೆ. ನನ್ನ ಪಕ್ಕೆಲುಬುಗಳು ಮುರಿತವಾಗಿದೆ. ಆದರೂ ನಾನು ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ಟ್ರೈಜಿಮಿನಲ್ ನರಶೂಲೆಯನ್ನು “ಆತ್ಮಹತ್ಯೆ ಕಾಯಿಲೆ” ಎಂದು ಕರೆಯಲಾಗುತ್ತದೆ. ಈ ಅಸ್ವಸ್ಥತೆಯು ಟ್ರೈಜಿಮಿನಲ್ ನರದ ಮೇಲೆ ಪರಿಣಾಮ ಬೀರುತ್ತದೆ. ಇದು ಹಲ್ಲುಜ್ಜುವುದು ಅಥವಾ ಅಗಿಯುವಂತಹ ಸರಳ ದೈನಂದಿನ ಚಟುವಟಿಕೆಗಳನ್ನು ಮಾಡುವಾಗ ತೀವ್ರವಾದ ಮುಖದ ನೋವಿಗೆ ಕಾರಣವಾಗುತ್ತದೆ.
ಇತ್ತೀಚಿನ ಕಾರ್ಯಕ್ರಮದಲ್ಲಿ ಸಲ್ಮಾನ್ ಅವರು ಮೆದುಳಿನ ರಕ್ತನಾಳದ ಉರಿಯೂತ ಮತ್ತು ಅಪಧಮನಿಯ ವಿರೂಪ (AVM) ದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದರು.
ದಿ ಗ್ರೇಟ್ ಇಂಡಿಯನ್ ಕಪಿಲ್ ಶೋನಲ್ಲಿ, ಸಲ್ಮಾನ್ ಖಾನ್ ಅವರು ಟ್ರೈಜಿಮಿನಲ್ ನರಶೂಲೆ, ಮೆದುಳಿನ ರಕ್ತನಾಳ ಮತ್ತು ಅಪಧಮನಿಯ ವಿರೂಪ ಸೇರಿದಂತೆ ಹಲವಾರು ಗಂಭೀರ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.
ಪ್ರಸಿದ್ಧ ಪುಣ್ಯಕ್ಷೇತ್ರ ಮುರುಡೇಶ್ವರದಲ್ಲಿ ವಸ್ತ್ರ ಸಂಹಿತೆ ಜಾರಿ..! ಈ ಬಗ್ಗೆ ಆಡಳಿತ ಮಂಡಳಿ ಹೇಳಿದ್ದೇನು..?