Latestಕ್ರೈಂ

ನಟ ಸಲ್ಮಾನ್​ ಖಾನ್​ ಮನೆಗೆ ಪ್ರವೇಶಿಸಲು ಯತ್ನಿಸಿದ ಮಹಿಳೆ ಅರೆಸ್ಟ್..! ಕಾರು ಬಳಸಿ ನಟನ ಮನೆಗೆ ನುಗ್ಗಿಸಲು ಯತ್ನಿಸಿದ ಮತ್ತೊಬ್ಬ ಪೊಲೀಸ್ ವಶಕ್ಕೆ..!

597

ನ್ಯೂಸ್ ನಾಟೌಟ್: ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ನ ಬಾಂದ್ರಾದಲ್ಲಿನ (ಪಶ್ಚಿಮ) ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ​​ನ ನಿವಾಸಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ, ಮುಂಬೈ ಪೊಲೀಸರು ಒಬ್ಬ ಪುರುಷ ಮತ್ತು ಮಹಿಳೆಯನ್ನು ಬಂಧಿಸಿದ್ದಾರೆ.
ಮಂಗಳವಾರ ಮತ್ತು ಬುಧವಾರ ಈ ಘಟನೆಗಳು ಜರುಗಿದ್ದು, ನಟನ ಮನೆಯ ಸುತ್ತ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.

“ಮಂಗಳವಾರ, ಛತ್ತೀಸ್‌ ಗಢದ ಜಿತೇಂದ್ರ ಕುಮಾರ್ ಸಿಂಗ್ ಎಂಬ 23 ವರ್ಷದ ಯುವಕ ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್ ಬಳಿ ನಿಂತಿದ್ದ” ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. “ಬೆಳಗ್ಗೆ, ಸಲ್ಮಾನ್ ಖಾನ್ ಭದ್ರತೆಗಾಗಿ ನಿಯೋಜಿಸಲ್ಪಟ್ಟಿದ್ದ ಪೊಲೀಸ್ ಅಧಿಕಾರಿಯೊಬ್ಬರು ಜಿತೇಂದ್ರ ಕುಮಾರ್ ಸಿಂಗ್ ಅಲೆದಾಡುತ್ತಿರುವುದನ್ನು ಗಮನಿಸಿ ಅಲ್ಲಿಂದ ಹೊರಹೋಗುವಂತೆ ಹೇಳಿದರು. ಕೋಪಗೊಂಡ ಸಿಂಗ್, ತನ್ನ ಮೊಬೈಲ್ ಫೋನ್ ಅನ್ನು ನೆಲಕ್ಕೆ ಎಸೆದ” ಎಂದು ಮಾಹಿತಿ ನೀಡಿದ್ದಾರೆ.

ಆ ಸಂಜೆ, ಸಿಂಗ್ ಅದೇ ಕಟ್ಟಡದ ನಿವಾಸಿಯೊಬ್ಬರಿಗೆ ಸೇರಿದ ಕಾರನ್ನು ಬಳಸಿಕೊಂಡು ಗ್ಯಾಲಾಕ್ಸಿ ಅಪಾರ್ಟ್‌ಮೆಂಟ್‌ ಆವರಣಕ್ಕೆ ಪ್ರವೇಶಿಸಿದ್ದಾನೆ. ಆದರೆ, ಪೊಲೀಸರು ಮತ್ತೊಮ್ಮೆ ಆತನನ್ನು ತಡೆಯುವಲ್ಲಿ ಯಶಸ್ವಿಯಾದರು. ಅವನನ್ನು ಬಾಂದ್ರಾ ಪೊಲೀಸರೆದುರು ಹಾಜರುಪಡಿಸಿ, ನಂತರ ವಶಕ್ಕೆ ಪಡೆಯಲಾಯಿತು.
ವಿಚಾರಣೆ ಸಮಯದಲ್ಲಿ, ಜಿತೇಂದ್ರ ಕುಮಾರ್ ಸಿಂಗ್ ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್​ ಖಾನ್​​ ಭೇಟಿಯಾಗಲು ಬಯಸಿದ್ದಾಗಿ ಹೇಳಿದ್ದಾನೆ. “ಪೊಲೀಸರು ಕಟ್ಟಡಕ್ಕೆ ಪ್ರವೇಶಿಸಲು ಬಿಡದ ಕಾರಣ ತಾನು ಒಳಗೆ ನುಸುಳಲು ಪ್ರಯತ್ನಿಸಿದೆ ಎಂದು ಸಿಂಗ್ ಒಪ್ಪಿಕೊಂಡಿದ್ದಾನೆ” ಎಂದು ಅಧಿಕಾರಿ ತಿಳಿಸಿದರು.

ಬುಧವಾರ ನಡೆದ ಇದೇ ರೀತಿಯ ಪ್ರತ್ಯೇಕ ಘಟನೆಯಲ್ಲಿ, ಮಹಿಳೆಯೊಬ್ಬರು ಕಟ್ಟಡದ ಭದ್ರತೆಯನ್ನು ಉಲ್ಲಂಘಿಸಿ ಸಲ್ಮಾನ್ ಖಾನ್ ಅವರ ಫ್ಲ್ಯಾಟ್ ಬಳಿ ಬಂದಿರುವ ಆರೋಪ ಕೇಳಿಬಂದಿದೆ. ಆದರೆ ನಟನ ಫ್ಲ್ಯಾಟ್ ಪ್ರವೇಶಿಸುವ ಮೊದಲೇ ಅವರನ್ನು ತಡೆಯಲಾಗಿದೆ.
ಗುರುವಾರ ಬೆಳಗ್ಗೆ ಮುಂಬೈ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. “ಮಹಿಳೆ ಕಟ್ಟಡದ ಭದ್ರತೆಯನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದರು. ಆದರೆ ನಟನ ಫ್ಲ್ಯಾಟ್ ತಲುಪುವ ಮೊದಲೇ ಆಕೆಯನ್ನು ತಡೆಯಲಾಯಿತು” ಎಂದು ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಮಹಿಳೆ ಯಾರು ಮತ್ತು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ತಿಳಿಯುವ ಸಂಬಂಧ ತನಿಖೆ ನಡೆಯುತ್ತಿದೆ. ಅವರು ಸ್ಥಳೀಯ ನಿವಾಸಿಯೇ ಅಥವಾ ಬೇರೆಡೆಯಿಂದ ಬಂದಿದ್ದಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.
ಅತಿಕ್ರಮಣ ಪ್ರವೇಶಕ್ಕೆ ಸಂಬಂಧಿಸಿದ ಕಲಂ ಅಡಿಯಲ್ಲಿ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ ಗಳನ್ನು ದಾಖಲಿಸಿದ್ದಾರೆ. ಇಬ್ಬರೂ ಬಂಧನದಲ್ಲಿದ್ದು, ತನಿಖೆ ಮುಂದುವರೆದಿದೆ.

ಪಾಕ್ ಪರ ಬೇಹುಗಾರಿಕೆ ಮಾಡುತ್ತಿದ್ದ ವಾರಣಾಸಿಯ ವ್ಯಕ್ತಿ ಅರೆಸ್ಟ್..! ಭಯೋತ್ಪಾದಕ ನಿಗ್ರಹ ದಳದಿಂದ ಕಾರ್ಯಾಚರಣೆ

See also  ಮಡಿಕೇರಿ: ದುಬಾರಿ ಬೆಲೆಯ ಮಾದಕ ವಸ್ತು ಮಾರಾಟ, ಆರೋಪಿ ಪೊಲೀಸ್ ಬಲೆಗೆ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget