ಕ್ರೈಂದೇಶ-ವಿದೇಶಸಿನಿಮಾ

ಸಲ್ಮಾನ್ ಖಾನ್ ಹತ್ಯೆಯ ಸಂಚು ರೂಪಿಸಿದ್ದ ಲಾರೆನ್ಸ್ ಬಿಷ್ಣೋಯ್ ಸಹೋದರನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ..! ಈತನ ವಿರುದ್ಧ 18 ಪ್ರಕರಣಗಳು ದಾಖಲು..!

240

ನ್ಯೂಸ್ ನಾಟೌಟ್ : ಬಂಧಿತ ಗ್ಯಾಂಗ್‌ ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಸಹೋದರ ಅನ್ಮೋಲ್ ಎಂಬಾತನ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶುಕ್ರವಾರ(ಅ.25) ಘೋಷಿಸಿದೆ.

ಎನ್‌ ಐಎ 2022ರಲ್ಲಿ ದಾಖಲಿಸಿರುವ ಎರಡು ಪ್ರಕರಣಗಳಲ್ಲಿ ಅನ್ಮೋಲ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮನೆಯ ಹೊರಗೆ ಇತ್ತೀಚೆಗೆ ಗುಂಡು ಹಾರಿಸಿದ್ದ ಶೂಟರ್‌ಗಳು, ಅನ್ಮೋಲ್‌ ಸೂಚನೆ ಮೇರೆಗೆ ನಟನನ್ನು ಕೊಲ್ಲುವುದಕ್ಕಾಗಿ ಬಂದಿದ್ದೆವು ಎಂದು ಪೊಲೀಸ್‌ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

‘ಭಾನು’ ಎಂದೂ ಕರೆಯಲ್ಪಡುವ ಅನೋಲ್ ಬಿಷ್ಣೋಯ್ ನಕಲಿ ಪಾಸ್ ಪೋರ್ಟ್ ಮೇಲೆ ಭಾರತದಿಂದ ಪಲಾಯನ ಮಾಡಿ, ಕಳೆದ ವರ್ಷ ಕೀನ್ಯಾದಲ್ಲಿ ಮತ್ತು ಈ ವರ್ಷ ಕೆನಡಾದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಅಕ್ಟೋಬರ್ 12 ರಂದು ಮುಂಬೈನ ಬಾಂದ್ರಾದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆಯ ಹಿಂದೆ ಅನ್ಮೋಲ್ ಬಿಷ್ಣೋಯ್ ಕೈವಾಡವಿದೆ ಎಂದು ಹೇಳಲಾಗಿದೆ. 2022ರಲ್ಲಿ ಪಂಜಾಬ್ ಗಾಯಕ ಸಿಧು ಮೊಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಕೂಡ ಆತನನ್ನು ಹುಡುಕಲಾಗುತ್ತಿದೆ. ಜೊತೆಗೆ ಈತ ಹಣ ಸಂಗ್ರಹಿಸಲು, ಕೇಂದ್ರಾಡಳಿತ ಪ್ರದೇಶವಾದ ದೆಹಲಿ ಮತ್ತು ಇತರ ಭಾಗಗಳಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಯುವಕರನ್ನು ನೇಮಿಸಿಕೊಳ್ಳುತ್ತಿದ್ದ ಎಂಬ ಆರೋಪಗಳೂ ಇವೆ.

ಅನ್ಮೋಲ್ ಬಿಷ್ಣೋಯ್ ವಿರುದ್ಧ 18 ಪ್ರಕರಣಗಳು ದಾಖಲಾಗಿವೆ. ಪಂಜಾಬ್‌ ನ ಫಾಜಿಲ್ಕಾ ಮೂಲದ ಅನ್ಮೋಲ್ ಬಿಷ್ಣೋಯ್ ಮತ್ತು ಲಾರೆನ್ಸ್ ಬಿಷ್ಣೋಯ್ ಇಬ್ಬರನ್ನೂ ಪ್ರಕರಣದಲ್ಲಿ ಬೇಕಾಗಿರುವ ಆರೋಪಿಗಳೆಂದು ಹೇಳಲಾಗಿದೆ. ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಗುಜರಾತ್‌ ನ ಸಬರಮತಿ ಜೈಲಿನಲ್ಲಿದ್ದಾನೆ.

Click

https://newsnotout.com/2024/10/storm-kannada-news-viral-news-5-84-lakh-people-d-replaced/
https://newsnotout.com/2024/10/lawyer-jagadeesh-kannada-news-viral-news-bigboss-house/
https://newsnotout.com/2024/10/traffic-police-kannada-news-viral-news-car-issue-viral-video-shivamogga/
https://newsnotout.com/2024/10/indian-army-attacked-by-kannada-news-viral-news-4-are-nomore/
https://newsnotout.com/2024/10/kannada-news-darshan-and-mobile-case-revealed-viral-nenws-hf/
See also  ಮೇಕೆ ಮೇಯಿಸಲು ಹೋಗಿದ್ದ ಅಪ್ರಾಪ್ತೆಗೆ ಗನ್ ತೋರಿಸಿ ಕಾರಿನೊಳಗೆ ಅತ್ಯಾಚಾರ..! ಪ್ರಕರಣ ಮುಚ್ಚಿ ಹಾಕಲು ಪೋಷಕರಿಗೆ ಹಣದ ಆಮಿಷವೊಡ್ಡಿದ ಕುಟುಂಬಸ್ಥರು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget