ಕ್ರೀಡೆ/ಸಿನಿಮಾಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ಸಲ್ಮಾನ್ ಖಾನ್ ಮನೆ ಮುಂದೆ ಗುಂಡಿನ ದಾಳಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..! ಬಂಧನವಾಗಿದ್ದ ವ್ಯಕ್ತಿ ಜೈಲಿನೊಳಗೆ ಆತ್ಮಹತ್ಯೆ..!

ನ್ಯೂಸ್ ನಾಟೌಟ್: ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಮುಂದೆ ಗುಂಡಿನ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಪೊಲೀಸ್ ಕಸ್ಟಡಿಯಲ್ಲಿಟ್ಟುಕೊಂಡು ಅವರನ್ನು ವಿಚಾರಣೆ ಮಾಡಲಾಗುತ್ತಿತ್ತು. ಈ ವೇಳೆ ಅನುಜ್ ಥಾಪಸ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೂಡಲೇ ಅವನನ್ನು ಆಸ್ಪತ್ರೆ ಕರೆದೊಯ್ಯಲಾಗಿದೆ.

ಅಷ್ಟರಲ್ಲಿ ಆತನ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಗುಂಡಿನ ದಾಳಿ ಮಾಡಿದವರನ್ನು ಅರೆಸ್ಟ್ ಮಾಡಲಾಗಿತ್ತು. ನಂತರ ಗನ್ ಅನ್ನು ನದಿಯಲ್ಲಿ ಬೀಸಾಕಿದ್ದನ್ನು ಪತ್ತೆ ಹಚ್ಚಿ, ಗನ್ ಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಆಮೇಲೆ ಗನ್ ಸಪ್ಲೈ ಮಾಡಿದವರನ್ನೂ ಪೊಲೀಸರು ಬಂಧಿಸಿದ್ದರು. ಗುಂಡಿನ ದಾಳಿ ನಡೆಸಿದ ಆರೋಪಿಗಳಿಗೆ ಗನ್ ಸರಬರಾಜು ಮಾಡಿದ್ದು ಸುಭಾಷ್ ಚಂದರ್ ಮತ್ತು ಅನುಜ್ ಥಾಪಸ್ ಎಂದು ಗೊತ್ತಾಗಿತ್ತು. ಈ ಇಬ್ಬರನ್ನೂ ಪಂಜಾಬ್ (Punjab) ನಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದರು.

ಮಾರ್ಚ್ 15ರಂದು ಆರೋಪಿಗಳಿಗೆ ಇವರು ಪಿಸ್ತೂಲ್ ಮತ್ತು ಕಾಟ್ರಿಜ್ ಗಳನ್ನು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದರು. ಈ ಇಬ್ಬರು ವ್ಯಕ್ತಿಗಳಲ್ಲಿ ಅನುಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ನಡುವೆ ಮುಂಬೈ ಪೊಲೀಸರಿಂದ ಮತ್ತೊಂದು ಆತಂಕಕಾರಿ ವಿಷಯ ಬಹಿರಂಗವಾಗಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯಿಂದ ಕ್ಯಾಬ್ ಬುಕ್ ಮಾಡಿದ್ದಕ್ಕಾಗಿ ಯುವಕನನ್ನು ಬಂಧಿಸಲಾಗಿತ್ತು.

Related posts

ಹೆಡ್ ಫೋನ್ ಹಾಕಿ ರೈಲು ಹಳಿ ಮೇಲೆ ಕುಳಿತಿದ್ದ ವಿದ್ಯಾರ್ಥಿಗೆ ರೈಲು ಡಿಕ್ಕಿ..! ಕುಟುಂಬದ ಏಕೈಕ ಪುತ್ರನ ಸಾವಿನಿಂದ ಕಂಗಾಲಾದ ಕುಟುಂಬ..!

Darshan Thoogudeepa: ಡಿ ಬಾಸ್ ಜೊತೆ ನಟಿಸಲಿದ್ದಾರೆ ತುಳುನಾಡ ಬೆಡಗಿ..! ಈಕೆ ಡ್ಯಾನ್ಸರ್ ಮತ್ತು ಬರಹಗಾರ್ತಿ

ಅಯೋಧ್ಯೆಯ ರಾಮಲಲ್ಲಾನನ್ನು ಕಾಣಲು ಭಕ್ತ ಸಾಗರ..! ದೂರದೂರುಗಳಿಂದ ಓಡೋಡಿ ಬರುತ್ತಿರುವ ಭಕ್ತರು..!ಇನ್ಮುಂದೆ ನಿತ್ಯ 1 ಗಂಟೆ ರಾಮಮಂದಿರ ಬಂದ್ ಮಾಡುತ್ತಿರುವುದೇಕೆ?