ದೇಶ-ಪ್ರಪಂಚ

ದೇವಸ್ಥಾನದ ಪ್ರಸಾದ ಸೇವಿಸಿ 300 ಮಂದಿಗೆ ಅಸ್ವಸ್ಥ..! ರೋಗಿಗಳಿಗೆ ರಸ್ತೆಯಲ್ಲೇ ಚಿಕಿತ್ಸೆ..!ಏನಿದು ಹೃದಯವಿದ್ರಾವಕ ಘಟನೆ?

ನ್ಯೂಸ್‌ ನಾಟೌಟ್‌:  ದೇವಸ್ಥಾನದ ಪ್ರಸಾದ ಸೇವಿಸಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಮನಕಲಕುವ ಘಟನೆಯೊಂದು ವರದಿಯಾಗಿದೆ. ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಅಸ್ವಸ್ಥರಿಗೆ ಬೆಡ್‌ಗಳ ಕೊರತೆಯುಂಟಾಗಿದ್ದು,ಆಸ್ಪತ್ರೆಯ ಹೊರಗೆ ಹಲವಾರು ರೋಗಿಗಳು ಚಿಕಿತ್ಸೆ ಪಡೆಯುತ್ತಿರುವುದು ಮನಕಲಕುವಂತಿತ್ತು ಎಂದು ಅನೇಕರು ಹೇಳಿಕೊಂಡಿದ್ದಾರೆ.ಸಲೈನ್ ಬಾಟಲಿಗಳನ್ನು ಮರಗಳಿಗೆ ಕೊಕ್ಕೆಯಿಂದ ನೇತುಹಾಕಲಾದ ದೃಶ್ಯಗಳು ವೈರಲಾಗಿದ್ದವು.

ಸೋಮಠಾಣಾ ಮತ್ತು ಖಾಪರಖೇಡ್ ಗ್ರಾಮಗಳ ಭಕ್ತಾಧಿಗಳು ರಾತ್ರಿ 10 ಗಂಟೆಗೆ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದ ನಂತರ ಪ್ರಸಾದ ಸೇವಿಸಿದ್ದಾರೆ. ಪ್ರಸಾದ ಸೇವಿಸಿದ ಸ್ವಲ್ಪ ಸಮಯದ ನಂತರ ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ ಬಂದು ಅಸ್ವಸ್ಥರಾಗಿದ್ದಾರೆ.ಅಸ್ವಸ್ಥರಾದ ಜನರನ್ನು ಬೀಬಿ ಗ್ರಾಮದ ಆಸ್ಪತ್ರೆಗೆ ರವಾನಿಸಲಾಯಿತು. ಈ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆಯಿಂದಾಗಿ ಬಹುತೇಕ ರೋಗಿಗಳು ಆಸ್ಪತ್ರೆಯ ಹೊರಭಾಗದ ಕಾಂಪೌಂಡ್​ನಲ್ಲಿ ಚಿಕಿತ್ಸೆ ನೀಡಲಾಯಿತು. ಮರದ ಕೋಲುಗಳನ್ನು ನಿಲ್ಲಿಸಿ ಅದಕ್ಕೆ ಕೊಕ್ಕೆ ಹಾಕಿದ್ದ ಹಗ್ಗಗಳ ಮೇಲೆ ಸಲೈನ್ ಬಾಟಲಿ ನೇತಾಕಿ ಚಿಕಿತ್ಸೆ ನೀಡಲಾಗಿದೆ ಎಂದು ವರದಿಯಾಗಿದೆ.

Related posts

ನನ್ನ ಮಕ್ಕಳ ತಂಟೆಗೆ ಬಂದ್ರೆ ಹುಷಾರ್..!,ಮಕ್ಕಳನ್ನು ಬೇಟೆಯಾಡಲು ಬಂದ ಚಿರತೆಯ ಬೆವರಿಳಿಸಿದ ಮುಳ್ಳುಹಂದಿ..!ವೈರಲ್ ವಿಡಿಯೋ ವೀಕ್ಷಿಸಿ

ಆಯೋಧ್ಯೆಯ ರಾಮಮಂದಿರಕ್ಕೆ ಬಾಂಬ್ ಬೆದರಿಕೆ ಪ್ರಕರಣ; ಇಬ್ಬರು ಅರೆಸ್ಟ್

ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ! ಸ್ಕ್ರೀನಿಂಗ್ ಪ್ರಕ್ರಿಯೆ ಸುಲಭಗೊಳಿಸಲು ಈ ನಿರ್ಧಾರ ?