ಕ್ರೈಂವೈರಲ್ ನ್ಯೂಸ್ಶಿಕ್ಷಣ

80 ಸಾವಿರ ಸಂಬಳ ಬಿಟ್ಟು ಕೆಇಎ ಪರೀಕ್ಷೆ ಬರೆಯಲು ಬಂದಿದ್ದವನಿಗೆ ಕಾದಿತ್ತು ಶಾಕ್! ಅಕ್ರಮ ಎಸಗಿದವ ಜೈಲು ಸೇರಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ನ್ಯೂಸ್‌ ನಾಟೌಟ್‌: ಕೆಇಎ (KEA) ನಡೆಸಿದ ಪರೀಕ್ಷೆಯಲ್ಲೂ (Exam) ಅಕ್ರಮ ನಡೆದಿರೋದು ಬೆಳಕಿಗೆ ಬಂದಿದೆ. ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿಯಿರುವ ಹುದ್ದೆಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಿನ್ನೆ ರಾಜ್ಯಾದ್ಯಂತ ಪರೀಕ್ಷೆ ನಡೆಸಿತ್ತು. ಈ ವೇಳೆ ಕಲಬುರಗಿ (Kalaburagi) ಸೇರಿದಂತೆ ಕೆಲವೆಡೆ ಅಕ್ರಮ ನಡೆದಿರೋದು ಬೆಳಕಿಗೆ ಬಂದಿದೆ.

ಕಲಬುರಗಿಯಲ್ಲಿ ಪರೀಕ್ಷಾ ಅಕ್ರಮದ ಆರೋಪಿ ಆಕಾಶ್ ಮಂಠಾಳೆ ಎಂಬಾತ 80 ಸಾವಿರ ರೂಪಾಯಿ ಖಾಸಗಿ ಉದ್ಯೋಗ ಬಿಟ್ಟು, ಸರ್ಕಾರಿ ನೌಕರಿ ಪಡೆಯಲೇ ಬೇಕು ಎಂದು ಕೆಇಎ ಪರೀಕ್ಷೆ ಬರೆದಿದ್ದ. ಆದರೆ ನಿಯತ್ತಾಗಿ ಪರೀಕ್ಷೆ ಬರೆಯೋದು ಬದಲು, ಪಿಎಸ್ಐ ಪರೀಕ್ಷಾ ಅಕ್ರಮದ ಆರೋಪಿ ಡಿ.ಆರ್. ಪಾಟೀಲ್ ಎಂಬಾತನ ಜೊತೆ 25 ಲಕ್ಷಕ್ಕೆ ಡೀಲ್ ಮಾಡಿಕೊಂಡಿದ್ದ ಎನ್ನಲಾಗಿದೆ.

ಕೆಇಎ ಪರೀಕ್ಷಾ ಅಕ್ರಮದಲ್ಲಿ ಸಿಕ್ಕಿ ಬಿದ್ದಿರುವ ಆರೋಪಿ ಆಕಾಶ್ ಮಂಠಾಳೆ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಒಳ್ಳೆಯ ಉದ್ಯೋಗ ಬಿಟ್ಟು ಬಂದಿದ್ದ ಎನ್ನಲಾಗಿದೆ. ಬಿಇ ಮೆಕ್ಯಾನಿಕಲ್ ಪದವಿ ಪಡೆದಿದ್ದ ಆಕಾಶ್, ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ ಸುಮಾರು 80 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಎನ್ನಲಾಗಿದೆ.

ಕೆಇಎ ನಡೆಸುತ್ತಿರುವ ಪರೀಕ್ಷೆಯಲ್ಲಿ ಬ್ಲ್ಯೂಟೂತ್ ಅಕ್ರಮದಲ್ಲಿ ಸಿಕ್ಕು ಬಿದ್ದಿರುವ ಆರೋಪಿ ಆಕಾಶ ಮಂಠಾಳೆ, ಹೇಗಾದ್ರೂ ಮಾಡಿ ನೌಕರಿ ಪಡಿಬೇಕು ಎನ್ನುವ ದುರಾಸೆಯಿಂದ ಅಕ್ರಮದಲ್ಲಿ ಶಾಮೀಲಾಗಿದ್ದ. ಪಿಎಸ್ಐ ಪರೀಕ್ಷಾ ಅಕ್ರಮದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಆರ್.ಡಿ. ಪಾಟೀಲ್ ಎಂಬಾತನ ಜೊತೆ ಆಕಾಶ್ ಡೀಲ್ ಮಾಡಿಕೊಂಡು ಪರೀಕ್ಷಾ ಅಕ್ರಮಕ್ಕಿಳಿದ್ದ ಎನ್ನಲಾಗಿದೆ.

ಇನ್ನು ಆರೋಪಿ ಅಕಾಶ್ ಆರ್‌. ಡಿ. ಪಾಟೀಲ್ ಜೊತೆ ಬರೋಬ್ಬರಿ 25 ಲಕ್ಷ ರೂಪಾಯಿಗೆ ಡೀಲ್ ಮಾಡಿಕೊಂಡಿದ್ದ. ಈ ಪೈಕಿ 8 ಲಕ್ಷ ಅಡ್ವಾನ್ಸ್ ಸಹ ಕೊಟ್ಟಿದ್ದ ಎನ್ನಲಾಗಿದೆ.
ಆದರೆ ಪರೀಕ್ಷೆ ಕೇಂದ್ರದೊಳಗೆ ಹೋಗುವ ಮುನ್ನವೇ ಪೊಲೀಸರ ಕೈಗೆ ಆಕಾಶ್ ಮಠಾಳೆ ಸಿಕ್ಕಿ ಬಿದ್ದಿದ್ದಾನೆ. 80 ಸಾವಿರ ಸಂಬಳದ ನೌಕರಿ ಬಿಟ್ಟು ಸರಕಾರಿ ನೌಕರಿ ಪಡೆಯಲು ಅಡ್ಡ ದಾರಿ ಹಿಡಿದ ತಪ್ಪಿಗೆ ಜೈಲು ಸೇರಿದ್ದಾನೆ.

Related posts

ಜ್ಞಾನಗಂಗೆಯನ್ನು ತಂದ ಭಗೀರಥ…

ಮೈಕ್ರೋಸಾಫ್ಟ್‌ ನ 365 ಆ್ಯಪ್‌ಗಳು ಮತ್ತು ಸೇವೆಗಳಲ್ಲಿ ತಾಂತ್ರಿಕ ಸಮಸ್ಯೆ..! ಜಗತ್ತಿನಾದ್ಯಂತ ವಿಮಾನಯಾನ, ಬ್ಯಾಂಕಿಂಗ್ ಸೇರಿದಂತೆ ಹಲವು ಸೇವೆಗಳು ವ್ಯತ್ಯಯ..!

ಪುತ್ತೂರು: ಆನ್ ಲೈನ್ ನಲ್ಲಿ ಡ್ರಮ್ ಖರೀದಿಸಿದ ಉದ್ಯಮಿಗೆ ಉಂಡೆನಾಮ..! ಮೂರು ಹಂತದಲ್ಲಿ ಹಣ ಪೀಕಿದ ವಂಚಕರು