ಸುಳ್ಯ

ಧ್ವನಿಮಾಯೆ ಕಲಾವಿದೆ ಜೇಸಿ ಸಾಯಿಶೃತಿಯವರಿಗೆ ಕ್ವೀನ್ ಆಫ್‌ ಝೋನ್‌ ಅವಾರ್ಡ್

ಸಾಯಿಶೃತಿ , ಧ್ವನಿಮಾಯೆ ಕಲಾವಿದೆ

ಸುಳ್ಯ: ಧ್ವನಿಮಾಯೆ ಕಲಾವಿದೆ ಜೇಸಿ ಸಾಯಿಶೃತಿಯವರಿಗೆ ವಲಯ ಮಟ್ಟದಲ್ಲಿ ಜೇಸಿಐ ಮಂಗಳೂರು ಇಂಪ್ಯಾಕ್ಟ್ ಘಟಕದ ವತಿಯಿಂದ ಕ್ಲೀನ್ ಆಫ್‌ ಝೋನ್‌ ಅವಾರ್ಡ್ ನೀಡಲಾಗಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷೆ ಜೇಸಿ ಸೆನೆಟರ್ ಸೌಜನ್ಯ ಹೆಗ್ಡೆ ಹಾಗೂ ಮಂಗಳೂರು ಇಂಪ್ಯಾಕ್ಟ್ ಘಟಕದ ಅಧ್ಯಕ್ಷರಾದ ಎಂ.ಸತ್ಯನಾರಾಯಣ್ ಭಟ್‌ ಅವರಿಂದ ಅವಾರ್ಡ್ ಸ್ವೀಕರಿಸಿದರು. ಸಾಯಿ ಶೃತಿ ಸುಳ್ಯದ ಪಿಲಿಕಜೆಯವರು. ಸುಳ್ಯದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ವಿದ್ಯಾರ್ಥಿನಿ. ಪಿಲಿಕಜೆ ಶಿವಸಾಯಿ ಭಟ್‌ -ಸುಜ್ಯೋತಿ ದಂಪತಿಗಳ ಪುತ್ರಿ. ಗೊಂಬೆಯ ಜತೆ ಮಾತನಾಡುವ ಅಪರೂಪದ ಧ್ವನಿಮಾಯೆ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಸಾಯಿಶೃತಿ ಯುವ ಸಮೂಹಕ್ಕೆ ಸ್ಫೂರ್ತಿ ಚಿಲುಮೆಯಾಗಿದ್ದಾರೆ.

Related posts

ಗೂನಡ್ಕ: ಬೆತ್ತಲೆಯಾಗಿ ರಾಷ್ಟ್ರೀಯ ಹೆದ್ದಾರಿಯಲ್ಲೆಲ್ಲಾ ಓಡಾಡಿದ ಯುವಕ..! ಗಾಬರಿಯಾದ ಜನ..!

ಸುಳ್ಯ : ಪರವಾನಿಗೆ ಇಲ್ಲದ ಖಾಸಗಿ ಬಸ್ ಗಳಿಗೆ ಬಿಗ್ ಬ್ರೇಕ್ !

ಸುಳ್ಯದಲ್ಲಿ ಮೋಡ ಕವಿದ ವಾತಾವರಣ, ಮಳೆ ಸಾಧ್ಯತೆ