ನ್ಯೂಸ್ ನಾಟೌಟ್: ಧ್ವನಿ ಮಾಯೆ ಕಲಾವಿದೆಯಾಗಿ ಗುರುತಿಸಿಕೊಂಡಿರುವ ಸುಳ್ಯದ ಹುಡುಗಿ ಸಾಯಿಶೃತಿ ಪಿಲಿಕಜೆ ಹೈದರಾಬಾದ್ ನಲ್ಲಿ ನಡೆದ ‘MISS WORLD INTERNATIONAL INDIA’ ಸ್ಪರ್ಧೆಯಲ್ಲಿ ಸೆಕೆಂಡ್ ರನ್ನರ್ ಅಪ್ಅವಾರ್ಡ್ ಪಡೆದುಕೊಂಡಿದ್ದಾರೆ.
ಪ್ರತಿಭಾವಂತ ಹುಡುಗಿ ಸಾಯಿಶೃತಿ ಪಿಲಿಕಜೆ ಧ್ವನಿ ಮಾಯೆ ಕಲಾವಿದೆಯಾಗಿ ಹಲವಾರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ವಿವಿಧ ಸಂಘ ಸಂಸ್ಥೆಗಳು ಅವರನ್ನು ಈ ಹಿಂದೆ ಗುರುತಿಸಿದ್ದನ್ನು ಸ್ಮರಿಸಬಹುದು.