ಕ್ರೈಂ

ಗ್ರಾಮ ಪಂಚಾಯತ್ ಸದಸ್ಯೆಯನ್ನೇ ಕಾಡಿನೊಳಗೆ ಎಳೆದೊಯ್ದ ಸೈಕೋ ಪ್ರೇಮಿ..? ಇಬ್ಬರು ನಾಪತ್ತೆ

ಚೆಂಬು: ಪಂಚಾಯತ್ ಸದಸ್ಯೆ ಕಮಲಾ ಕೇಶವ್ ಎಂಬುವವರನ್ನು ವ್ಯಕ್ತಿಯೊರ್ವ ಹೊಳೆಗೆ ದೂಡಿ ಹಾಕಿ ಬಳಿಕ ಆಕೆಯನ್ನು ಕಾಡಿನೊಳಗೆ ಹೊತ್ತೊಯ್ದ ಘಟನೆ ಕೊಡಗು ಜಿಲ್ಲೆಯ ಚೆಂಬು ಗ್ರಾಮದ ಡಬಡ್ಕ ಎಂಬಲ್ಲಿ ನಡೆದಿದೆ. ನಿನ್ನೆ ಸಂಜೆ ಏಳು ಗಂಟೆಗೆ ಈ ಘಟನೆ ನಡೆದಿದೆ ಎಂದು ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಗೆ ಮಾಹಿತಿ ನೀಡಿದ್ದಾರೆ. ಮುತ್ತು ಎನ್ನುವವ ಸೈಕೋ ಮುಂಚಿನಿಂದಲೂ ಕಮಲಾ ಅವರನ್ನು ಪ್ರೀತಿಸುತ್ತಿದ್ದ , ಪಾಗಲ್‌ ಪ್ರೇಮಿ ಕಮಲಾ ಅವರಿಗೆ ಮದುವೆಯಾಗಿದ್ದರೂ ಅವರನ್ನು ಕಾಡಿಸುತ್ತಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಆಕೆಯನ್ನು ಸೇತುವೆಯಿಂದ ಕೆಳಗೆ ತಳ್ಳಿ ಹಾಕಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಆತ ಆಕೆಯನ್ನು ಕಾಡಿನೊಳಗೆ ಕರೆದೊಯ್ದಿದ್ದಾನೆ. ಇಬ್ಬರ ಹುಡುಕಾಟ ನಡೆಯುತ್ತಿದೆ.

Related posts

80 ಸಾವಿರ ಸಂಬಳ ಬಿಟ್ಟು ಕೆಇಎ ಪರೀಕ್ಷೆ ಬರೆಯಲು ಬಂದಿದ್ದವನಿಗೆ ಕಾದಿತ್ತು ಶಾಕ್! ಅಕ್ರಮ ಎಸಗಿದವ ಜೈಲು ಸೇರಿದ್ದೇಗೆ? ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶಿಸಿ ಶಾಲಾ ಆವರಣದಲ್ಲೇ ವಿದ್ಯಾರ್ಥಿನಿ ಸಾವು..! 8 ವರ್ಷದ ಬಾಲಕಿಯನ್ನು ಬಲಿ ಪಡೆದ ಅಕ್ರಮ ವಿದ್ಯುತ್ ಸಂಪರ್ಕ..!

ಮಾರಕ ಆಯುಧಗಳೊಂದಿಗೆ ಮಾದಕ ದ್ರವ್ಯ ಮಾರಾಟ ಮಾಡಲು ಬಂದ ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು..! ಬಂಧಿತರಿಂದ 4 ಗ್ರಾಂ ನಿಷೇಧಿತ ಡ್ರಗ್ಸ್ , 3 ಮಾರಕ ಆಯುಧ ವಶಕ್ಕೆ