ಕರಾವಳಿಕ್ರೈಂ

ಕಲ್ಲುಗುಂಡಿ: ರಾತ್ರಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಬೆಳಗ್ಗೆ ಶವವಾದ..! ಹೋಟಲ್ ಕಾರ್ಮಿಕನ ಹಠಾತ್‌ ಸಾವು, ಸ್ಥಳಕ್ಕೆ ಪೊಲೀಸರ ಆಗಮನ

206

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನ ಸಂಪಾಜೆಯ ಕಲ್ಲುಗುಂಡಿಯ ಹೋಟೆಲ್ ವೊಂದರಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೊಬ್ಬ ರಾತ್ರಿ ಮಲಗಿದಲ್ಲೇ ಸಾವಿಗೀಡಾಗಿರುವ ಘಟನೆ ವರದಿಯಾಗಿದೆ.

ದೂರದ ಶಬರಿಮಲೆಯ ಪಂದಳದಿಂದ ಬಂದು ಕಲ್ಲುಗುಂಡಿಯ ಹೋಟೆಲ್ ನಲ್ಲಿ ಕೆಲಸ ನಿರತನಾಗಿದ್ದ ವಿಶ್ವನಾಥ ಎಂಬ ವ್ಯಕ್ತಿ ಸಾವಿಗೀಡಾಗಿರುವ ನತದೃಷ್ಟ. ಈತ ರಾತ್ರಿ ಹೋಟೆಲ್ ನಲ್ಲಿ ಚೆನ್ನಾಗಿಯೇ ಕೆಲಸ ಮಾಡಿಕೊಂಡು ಇದ್ದ. ಆದರೆ ಊಟ ಮಾಡಿ ಮಲಗಿದವ ಬೆಳಗ್ಗಿನ ಸಮಯದಲ್ಲಿ ಮೃತಪಟ್ಟಿರುವುದು ಗೊತ್ತಾಗಿದೆ. ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Click 👇

https://newsnotout.com/2024/05/costly-mango-miya-jacky
https://newsnotout.com/2024/05/village-panchayat-and-photo-viral-case
https://newsnotout.com/2024/05/kerala-bomb-issue
See also  ಪುತ್ತೂರು: ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮಿಂಚಿದ ತನಯ, ಪುತ್ತೂರಿನ ಪುಟಾಣಿಗೆ ಒಲಿದ ದ್ವಿತೀಯ ಸ್ಥಾನ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget