ಕೊಡಗುಸುಳ್ಯ

ಮಡಿಕೇರಿ: 150 ಗಂಟೆಗಳಿಗೂ ಅಧಿಕ ಕಾಲ ಯುದ್ಧ ವಿಮಾನ ಹಾರಾಟ ನಡೆಸಿ ಸಾಧನೆ , ಕೊಡಗಿನ ಸಚಿನ್ ಬೇಂಬೊರೆ ವಾಯು ಸೇನೆಯ ಫ್ಲೈಯಿಂಗ್ ಆಫೀಸರ್ ಆಗಿ ನೇಮಕ

306

ನ್ಯೂಸ್ ನಾಟೌಟ್: ಕೊಡಗಿನ ಕೀರ್ತಿ ಕಿರೀಟಕ್ಕೆ ಮತ್ತೊಂದು ಸಾಧನೆಯ ಗರಿ ಸೇರ್ಪಡೆಗೊಂಡಿದೆ. 150 ಗಂಟೆಗಳಿಗೂ ಅಧಿಕ ಕಾಲ ಯುದ್ಧ ವಿಮಾನ ಹಾರಾಟ ನಡೆಸಿ ಸಾಧನೆ ಮಾಡಿದ ಕೊಡಗಿನ ಸಚಿನ್ ಬೇಂಬೊರೆ ವಾಯು ಸೇನೆಯಲ್ಲಿ ಫ್ಲೈಯಿಂಗ್ ಆಫೀಸರ್ ಆಗಿ ನೇಮಕಗೊಂಡಿದ್ದಾರೆ.

ಸಚಿನ್ ಬಾಲ್ಯದಿಂದಲೂ ಅತ್ಯಂತ ಪ್ರತಿಭಾವಂತರಾಗಿದ್ದರು. ಇವರು ಕುಶಾಲನಗರದ ರಥ ಬೀದಿಯ ಉದ್ಯಮಿ ಪ್ರಸನ್ನ ಕುಮಾರ್ ಬಾಂಬೊರೆ ಮತ್ತು ವಾಣಿ ದಂಪತಿಯ ಪುತ್ರರಾಗಿದ್ದಾರೆ. ಸಚಿನ್ ಬೇಂಬೊರೆ ಇದೀಗ ಫ್ಲೈಯಿಂಗ್ ಆಫೀಸರ್ ರ‍್ಯಾಂಕ್ ಪಡೆದು ರಾಷ್ಟ್ರಪತಿಗಳಿಂದ ಗೌರವ ಸ್ವೀಕರಿಸಿರುವುದು ವಿಶೇಷವಾಗಿದೆ. ಯುಪಿಎಸ್‌ಸಿ ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ನಲ್ಲಿ ಪರೀಕ್ಷೆಗೆ ದೇಶದ ನಾಲ್ಕು ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಕೇವಲ ಒಂಬತ್ತು ಜನ ಆಯ್ಕೆಯಾಗಿದ್ದು, ಅದರಲ್ಲಿ ಸಚಿನ್ ಕೂಡ ಒಬ್ಬರಾಗಿದ್ದಾರೆ. ತರಬೇತಿಯಲ್ಲಿ ಕ್ರೀಡೆ, ಪ್ಲೈಯಿಂಗ್, ಯುದ್ಧ ಸಂದರ್ಭದಲ್ಲಿ ತಯಾರಿ, ಹೆಲಿಕಾಪ್ಟರ್ ಮತ್ತು ಫೈಟರ್ ಜೆಟ್ ಗಳಲ್ಲಿ ತರಬೇತಿ ಪಡೆದುಕೊಂಡಿದ್ದಾರೆ. ಇದೀಗ ರಜೆಯಲ್ಲಿ ಸಚಿನ್ ಬೇಂಬೊರೆ ಕುಶಾಲನಗರಕ್ಕೆ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಅತ್ಯಂತ ಕಠಿಣ ಪರಿಶ್ರಮ ಮತ್ತು ತರಬೇತಿಯಿಂದ ಈ ಮಟ್ಟಕ್ಕೆ ತಲುಪುವುದಕ್ಕೆ ನನಗೆ ಸಾಧ್ಯವಾಗಿದೆ. ನನ್ನ ಈ ಸಾಧನೆಗೆ ಶಿಕ್ಷಕರು, ತರಬೇತಿ ನೀಡಿದ ತರಬೇತಿದಾರರು ಹಾಗೂ ಕುಟುಂಬದ ಸಹಕಾರ ಅತ್ಯಂತ ಮಹತ್ವದ ಪಾತ್ರವಹಿಸಿದೆ ಎಂದು ಖುಷಿ ವ್ಯಕ್ತಪಡಿಸಿದರು. ದೇಶ ಸೇವೆ ಮಾಡುವ ಅವಕಾಶ ತನಗೆ ಒದಗಿರುವುದಾಗಿ ಹೆಮ್ಮೆಯಾಗುತ್ತಿದೆ ಎಂದು ತಿಳಿಸಿದರು. ಸಚಿನ್ ಹೈದರಾಬಾದ್ ಸಮೀಪದ ದುಂಡಿಗಲ್ ವಾಯು ಸೇನಾ ಅಕಾಡೆಮಿಯಿಂದ ಫ್ಲೈಯಿಂಗ್ ಆಫೀಸರ್ ತರಬೇತಿ ಪಡೆದುಕೊಂಡಿದ್ದಾರೆ.

See also  ಸುಳ್ಯ: ವಿಷ ಸೇವಿಸಿ ಆತ್ಮಹತ್ಯೆ ಗೆ ಯತ್ನ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget