ನ್ಯೂಸ್ ನಾಟೌಟ್: ಕೆಲವೇ ದಿನಗಳಲ್ಲಿ ಪುಟಿನ್ ಸಾವನ್ನಪ್ಪುತ್ತಾರೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಸಿ ಹೇಳಿಕೆ ನೀಡಿದ್ದರು. ಈಗ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಬಳಸುತ್ತಿದ್ದ ಲಿಮೋಸಿನ್ ಕಾರು (Limousine Car) ಸ್ಫೋಟಗೊಂಡಿದೆ.
ಮಾಸ್ಕೋ ನಗರದ ಫೈನಾನ್ಶಿಯಲ್ ಸ್ಟೆಬಿಲಿಟಿ ಬೋರ್ಡ್ ರಹಸ್ಯ ಸೇವಾ ಪ್ರಧಾನ ಕಚೇರಿಯ ಬಳಿ 2,75,000 ಪೌಂಡ್ (ಅಂದಾಜು 3.04 ಕೋಟಿ ರೂ.) ಮೌಲ್ಯದ ಔರಸ್ ಸೆನಾಟ್ ಕಂಪನಿಯ ಲಿಮೋಸಿನ್ ಕಾರು ಸ್ಫೋಟಗೊಂಡಿದೆ. ಈಗ ಈ ಪ್ರದೇಶದಲ್ಲಿ ಭದ್ರತಾ ತಪಾಸಣೆ ನಡೆಸಲಾಗುತ್ತಿದೆ.
ಸ್ಫೋಟಗೊಂಡ ಸಮಯದಲ್ಲಿ ಕಾರಿನಲ್ಲಿ ಯಾರು ಇದ್ದರು ಮತ್ತು ಸ್ಫೋಟಕ್ಕೆ ಕಾರಣ ಏನು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಮೊದಲು ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಮುಂಭಾಗದಿಂದ ದಟ್ಟವಾದ ಕಪ್ಪು ಹೊಗೆ ಬಂದಿದೆ ಎನ್ನಲಾಗಿದೆ.
JUST IN: 🇷🇺 Luxury limousine from Russian President Putin’s official motorcade exploded on the streets of Moscow, just blocks from the FSB headquarters.
It’s unclear if this is an attempted ass*ssination attempt pic.twitter.com/Da4tcUoZEU
— BRICS News (@BRICSinfo) March 29, 2025
72 ವರ್ಷದ ಪುಟಿನ್ ನಿಯಮಿತವಾಗಿ ರಷ್ಯಾ ನಿರ್ಮಿತ ಲಿಮೋಸಿನ್ ಕಾರನ್ನು ಬಳಸುತ್ತಾರೆ. ಈ ಹಿಂದೆ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್‌ನಂತಹ ನಾಯಕರಿಗೆ ಇದೇ ರೀತಿಯ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದರು.
ಲಿಮೋಸಿನ್ ಒಂದು ಐಷಾರಾಮಿ, ಉದ್ದವಾದ ಚಕ್ರದ ಬೇಸ್ ಹೊಂದಿರುವ ವಾಹನವಾಗಿದ್ದು ಹಲವು ದೇಶಗಳ ಅಧ್ಯಕ್ಷರು ಈ ರೀತಿಯ ಕಾರನ್ನು ಬಳಕೆ ಮಾಡುತ್ತಾರೆ.
ಇದನ್ನೂ ಓದಿ: ಇಂದು(ಮಾ.30) ಆರ್.ಎಸ್.ಎಸ್ ಮುಖ್ಯ ಕಚೇರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ..! ಇಲ್ಲಿದೆ ಸಂಪೂರ್ಣ ಮಾಹಿತಿ