Latestಕ್ರೈಂದೇಶ-ವಿದೇಶವಿಡಿಯೋವೈರಲ್ ನ್ಯೂಸ್

ಚಲಿಸುತ್ತಿರುವ ರೈಲಿನ ಕಿಟಕಿ ಪಕ್ಕ ಕುಳಿತ ಪ್ರಯಾಣಿಕರಿಗೆ ಕಪಾಳಮೋಕ್ಷ ಮಾಡಿದವ ಅರೆಸ್ಟ್..! ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಹುಚ್ಚಾಟ..!

240
Spread the love

ನ್ಯೂಸ್‌ ನಾಟೌಟ್ : ಇಂಟರ್‌ ನೆಟ್‌ ನಲ್ಲಿ ಖ್ಯಾತಿ ಗಳಿಸುವುದು ಮತ್ತು ಫಾಲೋವರ್ಸ್‌ ಸಂಖ್ಯೆ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಬಿಹಾರದ ಯೂಟ್ಯೂಬರ್‌ ರೊಬ್ಬರು ರೈಲು ಪ್ರಯಾಣಿಕರಿಗೆ ಕಪಾಳಮೋಕ್ಷ ಮಾಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಬಿಹಾರದ ಅನುಗ್ರಹ ನಾರಾಯಣ ರಸ್ತೆಯ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಯೂಟ್ಯೂಬರ್‌ ರೈಲು ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಚಲಿಸುತ್ತಿರುವ ರೈಲಿನ ಸಮೀಪ ಹೋಗುವ ಯೂಟ್ಯೂಬರ್‌, ಕಿಟಕಿ ಪಕ್ಕದಲ್ಲಿ ಕುಳಿತಿರುವ ಪ್ರಯಾಣಿಕರೊಬ್ಬರಿಗೆ ಏಕಾಏಕಿ ಕಪಾಳಮೋಕ್ಷ ಮಾಡಿದ್ದಾನೆ. ಬಳಿಕ ಏನೂ ಆಗಿಲ್ಲ ಎಂಬಂತೆ ಜೋರಾಗಿ ಕೂಗಾಡುತ್ತ ಹೋಗಿದ್ದಾನೆ. ಈ ವಿಡಿಯೋ ಆಧರಿಸಿ ಆರೋಪಿ ಯೂಟ್ಯೂಬರ್‌ ರಿತೇಶ್ ಕುಮಾರ್‌ ನನ್ನು ಬಂಧಿಸಲಾಗಿದೆ ಎಂದು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಮಾಹಿತಿ ನೀಡಿದೆ. ಜತೆಗೆ, ಘಟನೆ ಬಗ್ಗೆ ಯೂಟ್ಯೂಬರ್‌ ಕ್ಷಮೆಯಾಚಿಸಿರುವ ವಿಡಿಯೋವನ್ನು ಇಲಾಖೆ ಪೋಸ್ಟ್ ಮಾಡಿದೆ.

See also  ಕಾರು-ಬೈಕ್‌ ಮುಖಾಮುಖಿ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ
  Ad Widget   Ad Widget   Ad Widget   Ad Widget