ನ್ಯೂಸ್ ನಾಟೌಟ್: ಭಾರತದಲ್ಲಿ ನಡೆದ 3 ಪ್ರಮುಖ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರನಾಗಿದ್ದ ಲಷ್ಕರ್-ಎ-ತೈಬಾ ಸಂಘಟನೆಯ ಟಾಪ್ ಉಗ್ರನನ್ನು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಭಾನುವಾರ(ಮೇ.18) ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
ಸೈಫುಲ್ಲಾ ಅಲಿಯಾಸ್ ವಿನೋದ್ ಕುಮಾರ್ ಅಲಿಯಾಸ್ ಮೊಹಮ್ಮದ್ ಸಲೀಮ್ ಅಲಿಯಾಸ್ ಖಾಲಿದ್ ಅಲಿಯಾಸ್ ವನಿಯಾಲ್ ಅಲಿಯಾಸ್ ವಾಜಿದ್ ಅಲಿಯಾಸ್ ಸಲೀಂ ಭಾಯ್ ಹೆಸರುಗಳಿಂದ ಈತ ಗುರುತಿಸಿಕೊಂಡಿದ್ದ. ಈ ಮೋಸ್ಟ್ ವಾಂಟೆಡ್ ಆಗಿದ್ದ ಲಷ್ಕರ್ ಉಗ್ರರನನ್ನು ಸಿಂಧ್ ಪ್ರಾಂತ್ಯದ ಬಾದಿನ್ ಜಿಲ್ಲೆಯ ಮಟ್ಲಿ ತಾಲೂಕಿನಲ್ಲಿ ಅಪರಿಚಿತ ಗುಂಪೊಂದು ಹತ್ಯೆ ಮಾಡಿದೆ ಎಂದು ತಿಳಿದುಬಂದಿದೆ.
2001 ರಲ್ಲಿ ರಾಂಪುರದಲ್ಲಿ ನಡೆದ ಸಿಆರ್ ಪಿಎಫ್ ಶಿಬಿರದ ಮೇಲಿನ ದಾಳಿ, 2005 ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ನಡೆದಿದ್ದ ಗುಂಡಿನ ದಾಳಿ ಹಾಗೂ 2006 ರಲ್ಲಿ ನಾಗ್ಪುರದ ಆರ್ ಎಸ್ ಎಸ್ ಪ್ರಧಾನ ಕಚೇರಿ ಮೇಲೆ ನಡೆದಿದ್ದ ದಾಳಿಗಳಿಗೆ ಖಾಲಿದ್ ಪ್ರಮುಖ ಸಂಚುಕೋರನಾಗಿದ್ದ ಎನ್ನಲಾಗಿದೆ.
ಪ್ರಚಾರಕ್ಕಾಗಿ ‘ಆಪರೇಷನ್ ಸಿಂದೂರ್’ ವಿಷಯ ಬಳಸಿಕೊಂಡ ವೈದ್ಯ ಅಮಾನತ್ತು..! ತನಿಖೆಗೆ ಸಮಿತಿ ರಚಿಸಿದ ಆಸ್ಪತ್ರೆ..!