ಕ್ರೈಂವೈರಲ್ ನ್ಯೂಸ್

RSS ಮುಖ್ಯಸ್ಥನ ಮೇಲೆ ದಾಳಿಯ ಸುಳಿವು ಸಿಕ್ಕಿದ್ದೇಗೆ..? ಮೋಹನ್ ಭಾಗವತ್ ಮೇಲೆ ದಾಳಿಗೆ ಪ್ಲಾನ್ ಮಾಡಿದ್ಯಾರು?

240

ನ್ಯೂಸ್ ನಾಟೌಟ್: ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಐಎಸ್‍ಐ ಹಾಗೂ ಇಸ್ಲಾಮಿಕ್ ಭಯೋತ್ಪಾದಕರಿಂದ ಆರ್ ಎಸ್‍ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagawat) ಮೇಲೆ ದಾಳಿ ನಡೆಯುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆಯು ಎಚ್ಚರಿಕೆ ನೀಡಿದೆ. ಈ ಘಟನೆ ಬಿಹಾರ ಭೇಟಿ ವೇಳೆ ನಡೆಯಬಹುದು ಎಂಬ ಸೂಚನೆ ಸಿಕ್ಕಿದೆ ಎನ್ನಲಾಗಿದೆ.

ಮೋಹನ್ ಭಾಗವತ್ ಈಗಾಗಲೇ ಝಡ್ ಮಾದರಿಯ ಭದ್ರತೆಯನ್ನು ಹೊಂದಿದ್ದಾರೆ. ಆದರೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲೆಂದು ಎರಡು ದಿನಗಳ ಭೇಟಿಗಾಗಿ ಪಾಟ್ನಾಗೆ ಆಗಮಿಸಿರುವ ಭಾಗವತ್ ಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸುವ ಭಾಗಲ್ಪುರದಲ್ಲಿ ಪ್ರತಿಯೊಂದು ವಾಹನ, ವಸತಿಗೃಹ, ಜನದಟ್ಟಣೆ ಪ್ರದೇಶಗಳಲ್ಲಿ ಪ್ರತಿಯೊಬ್ಬರನ್ನೂ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಗುಪ್ತಚರ ಇಲಾಖೆಯ ಎಚ್ಚರಿಕೆಯಿಂದಾಗಿ ಮೋಹನ್ ಭಾಗವತ್ ಗೆ ಎಲ್ಲಾ ರೀತಿಯ ಭದ್ರತೆಗಳನ್ನು ಒದಗಿಸಲಾಗುತ್ತಿದೆ ಎಂದು ಬಿಹಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

See also  ವಿಶ್ವದ ಟಾಪ್ 20 ಅತ್ಯಂತ ಹೆಚ್ಚು ಮಾಲಿನ್ಯ ನಗರಗಳಲ್ಲಿ ಭಾರತದ 13 ನಗರಗಳು ಸೇರ್ಪಡೆ..! ಯಾವುವು ಆ ನಗರಗಳು..?
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget