ಕ್ರೈಂ

ಆರ್‌ಎಸ್‌ಎಸ್ ಕಾರ್ಯಕರ್ತನ ಇರಿದು ಹತ್ಯೆ

856

ಆಲಪ್ಪುಳ : ಹರಿಪಾಡ್ ಪ್ರದೇಶದಲ್ಲಿ ಯುವ ಆರ್‌ಎಸ್‌ಎಸ್ ಕಾರ್ಯಕರ್ತನೊಬ್ಬ ತಾಳಂ ನೃತ್ಯ ಮಾಡಲು ತೆರಳಿದ್ದ ಸಮೀಪದ ದೇವಸ್ಥಾನದಲ್ಲಿ ಜಗಳವಾಡಿದ ಹಿನ್ನೆಲೆಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಘಟನೆಗೆ ಸಂಬAಧಿಸಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಹತ್ಯೆಯ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ತ್ರಿಶೂರ್ ನಲ್ಲಿ ಮಾತನಾಡಿ, ಹತ್ಯೆಗೀಡಾ ದವನು ಆರ್‌ಎಸ್‌ಎಸ್ ಕಾರ್ಯಕರ್ತ ನಾಗಿದ್ದು, ಡ್ರಗ್ ಮಾಫಿಯಾದ ಸದಸ್ಯರು ಅವರನ್ನು ನಿರ್ದಯವಾಗಿ ಇರಿದು ಕೊಂದಿದ್ದಾರೆ. ಪ್ರಕರಣದ ಆರೋಪಿಗಳೆಲ್ಲರೂ ಸಿಪಿಐ(ಎಂ) ಕಾರ್ಯಕರ್ತರು. ಹತ್ಯೆಗೀಡಾದ ಶರತ್ ಚಂದ್ರನ್ ಹಿಂದೆ ಬಿಜೆಪಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೆ, ಈಗಲೂ ಅವರು ಪಕ್ಷದೊಂದಿಗೆ ಸಂಬAಧ ಹೊಂದಿದ್ದಾರೆಯೇ ಎಂಬುದು ಖಚಿತವಾಗಿಲ್ಲ. ಬುಧವಾರ ರಾತ್ರಿ ಶರತ್ ಚಂದ್ರನ್ ತನ್ನ ಕೆಲವು ಸ್ನೇಹಿತರೊಂದಿಗೆ ದೇವಸ್ಥಾನದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

See also  ನಡೆದುಕೊಂಡು ಹೋಗುತ್ತಿದ್ದ ಬಾಲಕನಿಗೆ ಗುದ್ದಿ ಪರಾರಿಯಾದ ಬೈಕ್ ಚಾಲಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget