ಕರಾವಳಿಕ್ರೈಂರಾಜ್ಯ

ಬೆಳ್ತಂಗಡಿ: ಆಯತಪ್ಪಿ ನೇತ್ರಾವತಿ ನದಿಗೆ ಬಿದ್ದ RSS ಕಾರ್ಯಕರ್ತ..! ತಡರಾತ್ರಿ ಪ್ರಸಾದ್ ಮೃತದೇಹ ಮೇಲಕ್ಕೆತ್ತಿದ ಮುಳುಗು ತಜ್ಞರು

270

ನ್ಯೂಸ್ ನಾಟೌಟ್: ನೇತ್ರಾವತಿ ನದಿಗೆ ಆಯತಪ್ಪಿ ಬಿದ್ದಿದ್ದ ಆರ್ ಎಸ್ಎಸ್ ಕಾರ್ಯಕರ್ತನ ಮೃತದೇಹ ಪತ್ತೆಯಾಗಿದ್ದು, ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ.

ಸೋಮವಾರ(ಡಿ.2) ಸಂಜೆ ಪ್ರಸಾದ್ ಮೂವರೊಂದಿಗೆ ನೀರಿಗೆ ಇಳಿದಿದ್ದು ಈ ವೇಳೆ ಪ್ರಸಾದ್ ಆಯತಪ್ಪಿ ನೀರಿನಲ್ಲಿ ಮುಳುಗಿದ್ದಾರೆ. ಜತೆಗಿದ್ದವರು ರಕ್ಷಿಸಲು ಯತ್ನಿಸಿದ್ದು, ಈ ವೇಳೆ ಪ್ರಸಾದ್ ಮುಳುಗಿ ನಾಪತ್ತೆಯಾಗಿದ್ದರು.

ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಮುಳುಗು ತಜ್ಞ ಈಶ್ವರ್ ಮಲ್ಪೆ ಕೂಡ ಆಗಮಿಸಿದ್ದರು. ಮುಳುಗು ತಜ್ಞ ಬೆಳ್ತಂಗಡಿಯ ಸಂಜಯ ನಗರದ ಇಸ್ಮಾಯಿಲ್‌ ಹಾಗೂ ಅಗ್ನಿಶಾಮಕ ದಳದವರು ರಾತ್ರಿ 11 ರ ಹೊತ್ತಿಗೆ ಪ್ರಸಾದ್ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಪ್ರಸಾದ್ ವಿವಾಹಿತರಾಗಿದ್ದು, ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಪ್ರಸಾದ್ ಆರ್ ಎಸ್ ಎಸ್ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದರು.

Click

https://newsnotout.com/2024/12/chatrapati-shivaji-film-by-rishab-shetty-kannada-news-telugu/
https://newsnotout.com/2024/12/cyclone-kannada-news-stalin-case-7-people-nomore/
https://newsnotout.com/2024/12/shobhita-kannada-news-cremation-viral-news-hasana/
https://newsnotout.com/2024/12/kaadaba-man-suspence-case-revealed-viral-news-police/
https://newsnotout.com/2024/12/karimani-kannada-news-atm-theft-viral-news-krishna/
See also  ಅಡ್ಕಾರಿನಲ್ಲಿ ಪಾದಾಚಾರಿಗೆ ಕಾರು ಗುದ್ದಿದ ಪ್ರಕರಣ: ಊರಿನಲ್ಲಿ ವ್ಯವಸ್ಥೆ ಇಲ್ಲವೆಂದು ಸುಳ್ಯದಲ್ಲೇ ಕೂಲಿ ಕಾರ್ಮಿಕನ ಅಂತ್ಯಕ್ರಿಯೆ, ಇಬ್ಬರು ಮಕ್ಕಳ ಜೊತೆಗೆ ಕಣ್ಣೀರಿಡುತ್ತಾ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಪತ್ನಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget