Uncategorized

ಆರ್‌ಎಸ್ಎಸ್‌ ಕಾರ್ಯಕರ್ತನಿಗೆ ಬೆದರಿಕೆ ಹಾಕಿದ್ದು ಇಬ್ಬರು ಅಪ್ರಾಪ್ತರು..!

ನ್ಯೂಸ್ ನಾಟೌಟ್: ಆರ್‌ಎಸ್‌ಎಸ್‌ ಕಾರ್ಯಕರ್ತರೊಬ್ಬರಿಗೆ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಆರ್ ಎಸ್ಎಸ್‌ ಕಾರ್ಯಕರ್ತ ಕಡೂರಿನ ಡಾ. ಶಶಿಧರ್ ಚಿಂದಿಗೆರೆ ಅವರ ಕಾರಿನ ಮೇಲೆ ಕ್ಷುಲ್ಲಕ ಬರವಣಿಗೆ ಬರೆದ ಘಟನೆ ಭಾರಿ ಚರ್ಚೆಗೆ ಕಾರಣವಾಗಿತ್ತು. ಈ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸರು ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ.

ಕಾರಿನ ಮೇಲೆ ‘ಕಿಲ್ ಯೂ, ಜಿಹಾದಿ ಹಾಗೂ ಇನ್ನಿತರ ಅಶ್ಲೀಲ ಬರಹಗಳನ್ನು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆ.29ರಂದು ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೂತನ ಮಾದರಿಯ ಕಾರು ಇದಾಗಿದ್ದು ಇಂತಹ ಕಾರು ಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಲ್ಲಿನಲ್ಲಿ ಬರಹ ಗೀಚಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರೋಪಿಗಳ ಮೇಲೆ ಐಪಿಸಿ 427,505(2),506 ರಡಿ ಪ್ರಕರಣ ದಾಖಲಿಸಲಾಗಿದೆ.

Related posts

ಹಿಜಾಬ್ ವಿವಾದ: ದ್ವಿಸದಸ್ಯ ಪೀಠಕ್ಕೆ ವರ್ಗಾಯಿಸಿದ ನ್ಯಾಯಾಲಯ

ಕೆಲಸಕ್ಕೆಂದು ಕುವೈಟ್‌ ಗೆ ತೆರಳಿದಾಕೆಯನ್ನು ರೂಮ್ ನಲ್ಲಿ ಕೂಡಿಹಾಕಿ ಚಿತ್ರಹಿಂಸೆ..! ನನ್ನ ರಕ್ಷಿಸಿ ಎಂದು ವಿಡಿಯೋ ಮೂಲಕ ಬೇಡಿಕೊಂಡ ಮಹಿಳೆ

ನಾಲ್ಕನೇ ಮದುವೆಗೆ ಕಾಲಿಟ್ಟ ನರೇಶ್,ನಟಿ ಪವಿತ್ರಾ ಲೋಕೇಶ್ ಜತೆ ವಿವಾಹ,ಫೋಟೋ ವೈರಲ್