ಕರಾವಳಿದೇಶ-ವಿದೇಶರಾಜಕೀಯವೈರಲ್ ನ್ಯೂಸ್

‘ಆರ್​ಎಸ್​ಎಸ್’​ ದಿ ಬಿಗ್ಗೆಸ್ಟ್ ಟೆರರಿಸ್ಟ್​ ಆರ್ಗನೈಸೇಷನ್ ಇನ್​ ದಿ ಕಂಟ್ರಿ, ವಿವಾದ ಸೃಷ್ಟಿಸಿದ ಮದರಸಾದಲ್ಲಿ ಸಿಕ್ಕಿದ ಆರ್ ಎಸ್ ಎಸ್ ಕುರಿತ ಪುಸ್ತಕ

170

ನ್ಯೂಸ್ ನಾಟೌಟ್: ನಕಲಿ ನೋಟು ಮುದ್ರಣಕ್ಕೆ ಸಂಬಂಧಿಸಿದಂತೆ ಬಂದ ಮಾಹಿತಿ ಮೇರೆಗೆ ಮದರಸಾಗೆ ಶೋಧಕ್ಕೆಂದು ಹೋಗಿದ್ದ ಅಧಿಕಾರಿಗಳಿಗೆ ಆರ್​ಎಸ್​ಎಸ್​(RSS) ಕುರಿತ ವಿವಾದಾತ್ಮಕ ಪುಸ್ತಕ ಸಿಕ್ಕಿದೆ. ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ಘಟನೆ ನಡೆದಿದೆ. ಆಗಸ್ಟ್ 28ರಂದು ಅತರ್ಸುಯ್ಯಾ ಪ್ರದೇಶದ ಜಾಮಿಯಾ ಹಬೀಬಿಯಾ ಮಸೀದಿ ಅಜಮ್ ಮದರಸಾದಲ್ಲಿ ನಡೆದ ದಾಳಿಯಲ್ಲಿ ನಕಲಿ ನೋಟುಗಳ ಜೊತೆಗೆ, ಪೊಲೀಸರು ಪುಸ್ತಕವನ್ನು ಪತ್ತೆ ಮಾಡಿದರು.

ಆರ್​ಎಸ್​ಎಸ್​ ದಿ ಬಿಗ್ಗೆಸ್ಟ್ ಟೆರರಿಸ್ಟ್​ ಆರ್ಗನೈಸೇಷನ್ ಇನ್​ ದಿ ಕಂಟ್ರಿ (RSS: The Biggest Terrorist Organization in the Country) ಎನ್ನುವ ಪುಸ್ತಕವನ್ನು ಉರ್ದುವಿನಿಂದ ಹಿಂದಿಗೆ ತರ್ಜುಮೆ ಮಾಡಲಾಗಿದೆ. ಈ ಪುಸ್ತಕವನ್ನು ಎಸ್​ಎಂ ಮುಷರಫ್​ ಎಂಬುವವರು ಬರೆದಿದ್ದಾರೆ.

ಮದರಸಾದಲ್ಲಿ ಆರ್​ಎಸ್​ಎಸ್​ ವಿರುದ್ಧ ಮಕ್ಕಳಲ್ಲಿ ವಿಷಬೀಜ ಬಿತ್ತಲು ಮೌಲ್ವಿ ಮೊಹಮ್ಮದ್ ತಫ್ಸೀರುಲ್ ಅರಿಫೀನ್​ ಈ ಪುಸ್ತಕವನ್ನು ಬಳಕೆ ಮಾಡುತ್ತಿರಬಹುದು ಎಂದು ಅನುಮಾನಿಸಲಾಗಿದೆ. ಅವರ ಲೇಖನ ಪಾಕಿಸ್ತಾನದ ಡಾನ್ ಪತ್ರಿಕೆಯಲ್ಲಿಯೂ ಪ್ರಕಟವಾಗಿದೆ. ಮದರಸಾದಲ್ಲಿ ಈ ಪುಸ್ತಕ ಪತ್ತೆಯಾದ ನಂತರ ಭದ್ರತಾ ಏಜೆನ್ಸಿಗಳು ಎಚ್ಚೆತ್ತಿವೆ. ಅವರ ಬಳಿಯಿಂದ 1 ಲಕ್ಷ ರೂಪಾಯಿಯ ನಕಲಿ ನೋಟುಗಳು ಮತ್ತು ಮುದ್ರಣಕ್ಕೆ ಬಳಸಲಾದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

Click

https://newsnotout.com/2024/09/pocso-case-on-father-14-year-old-girl-case-kannada-news-tumakur/
https://newsnotout.com/2024/09/renuka-swamy-case-darshan-and-gang-final-charge-sheet-summitting-today/
https://newsnotout.com/2024/09/charge-sheet-kannada-news-hariyan-govt-kannada-news-degree-holders/
See also  ತಮಿಳಿನ ಖ್ಯಾತ ನಟ ಅಜಿತ್ ಆಸ್ಪತ್ರೆಗೆ ದಾಖಲು, ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget