ಕ್ರೈಂಬೆಂಗಳೂರು

ರೌಡಿಶೀಟರ್‌ ಹೆಸರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾನ್ಸ್ ಪೇಜ್‌..! 60 ಅಕೌಂಟ್‌ ನಿಂದ 500ಕ್ಕೂ ಹೆಚ್ಚು ವಿಡಿಯೋ ಗಳನ್ನು ಡಿಲೀಟ್‌ ಮಾಡಿಸಿದ ಸಿಸಿಬಿ..! ಅಡ್ಮಿನ್‌ ಮೇಲೆ ಕೇಸ್ ದಾಖಲು..!

127

ನ್ಯೂಸ್ ನಾಟೌಟ್: ಬೆಂಗಳೂರಿನ ದೊಡ್ಡ ದೊಡ್ಡ ರೌಡಿಶೀಟರ್‌ಗಳಿಗೆ ಬಿಲ್ಡಪ್‌ ಕೊಡೋ ರೀತಿ ರೀಲ್ಸ್‌ ಮಾಡುತ್ತಿದ್ದ ಪುಡಿರೌಡಿಗಳಿಗೆ ಸಿಸಿಬಿ ಪೊಲೀಸರು ಈ ಹಿಂದೆಯೂ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಸುಮಾರು 60 ಇನ್‌ಸ್ಟ್ರಾಗ್ರಾಂ ಹಾಗೂ ಯುಟ್ಯೂಬ್‌ ಖಾತೆಗಳನ್ನು ಪತ್ತೆ ಹಚ್ಚಿದ್ದಾರೆ.

ಇತ್ತೀಚೆಗೆ ರೌಡಿಗಳ ಹೆಸರಿನಲ್ಲಿ ಫ್ಯಾನ್ಸ್‌ ಪೇಜ್‌ ಗಳನ್ನು ತೆರೆದು ರೌಡಿಗಳ ವಿಡಿಯೋ ಮತ್ತು ಫೋಟೋಗಳಿಗೆ ಬೆಂಕಿ, ಲಾಂಗು ಮಚ್ಚು, ಎಫೆಕ್ಟ್ ಗಳನ್ನು ಹಾಕಿ ಸಿನಿಮಾ ಶೈಲಿಯಲ್ಲಿ ಹೊಗಳುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಸಿಸಿಬಿಗೆ ಹತ್ತಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ಪೇಜ್‌ಗಳು ಹಾಗೂ ಯುಟ್ಯೂಬ್‌ ಅಡ್ಮಿನ್‌ಗಳನ್ನು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.

ಈ ಅಡ್ಮಿನ್‌ಗಳ ಪೈಕಿ ಬಹುತೇಕ ಮಂದಿ ಅಪ್ರಾಪ್ತರು ಎಂಬುದು ಗೊತ್ತಾಗಿದೆ.ವಿಲ್ಸನ್‌ ಗಾರ್ಡನ್‌ ನಾಗ, ಮಾರತ್‌ ಹಳ್ಳಿ ರೋಹಿತ್‌, ಸೈಲೆಂಟ್‌ ಸುನೀಲ, ಕುಣಿಗಲ್ ಗಿರಿ ಸೇರಿ ಹಲವಾರು ರೌಡಿಗಳ ಶಿಷ್ಯರು ಯುವಕರನ್ನು ಆನ್‌ ಲೈನ್‌ ಮೂಲಕ ಸಂಪರ್ಕಿಸುತ್ತಿದ್ದರು. ಜೈಲಿನಲ್ಲಿರುವ ಹಾಗೂ ಹೊರಗಡೆ ಇರುವ ರೌಡಿಶೀಟರ್‌ಗಳು ಕೆಲವು ಹುಡುಗರನ್ನು ಬಳಸಿಕೊಂಡು ರೌಡಿಗಳ ಪರವಾಗಿ ಫ್ಯಾನ್ಸ್‌ ಪೇಜ್‌ಗಳನ್ನು ತೆರೆದು ಅದಕ್ಕೆ ಫಾಲೋಯಿಂಗ್‌ ಬರುವಂತೆ ನೋಡಿಕೊಳ್ಳುತ್ತಿದ್ದರು. ಇದು ಸಿಸಿಬಿ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಫ್ಯಾನ್ಸ್‌ ಪೇಜ್‌ಗಳ ಕ್ರಿಯೇಟ್‌ ಮಾಡಿದ್ದ ಅಡ್ಮಿನ್‌ಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ‌

ಇದರಲ್ಲಿ ಬಹುತೇಕರು ಅಪ್ರಾಪ್ತರು ಎಂದು ತಿಳಿದು ಬಂದಿದ್ದು, ಹೀಗಾಗಿ ಅಪ್ರಾಪ್ತರ ಪಾಲಕರನ್ನು ಕರೆಸಿ ಬುದ್ಧಿವಾದ ಹೇಳಿ ಎಚ್ಚರಿ ಕೊಡುವ ಕೆಲಸ ನಡೆಯುತ್ತಿದೆ. ಈ ಸಂಬಂಧ ನಾಲ್ವರು ವಯಸ್ಕರ ವಿರುದ್ಧ ಪ್ರಕರಣ ಕೂಡ ದಾಖಲಿಸಲಾಗಿದೆ. 60 ಅಕೌಂಟ್‌ನಿಂದ 500ಕ್ಕೂ ಹೆಚ್ಚು ವಿಡಿಯೋ ಗಳನ್ನು ಸಿಸಿಬಿ ಡಿಲೀಟ್‌ ಮಾಡಿಸಿದೆ. ‌ಹಣ ಕೊಟ್ಟ ವಿಡಿಯೋ ಮಾಡಿಸಿದ್ದವರಿಗೆ ಶೋಧ ಕಾರ್ಯ ನಡೆಯುತ್ತಿದೆ ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು. ಒಂದು ವಿಡಿಯೋ ಎಡಿಟ್‌ ಮಾಡಿ ಪೋಸ್ಟ್‌ ಮಾಡಲು ರೌಡಿಗಳ ಶಿಷ್ಯಂದಿರು ಅಡ್ಮಿನ್‌ಗಳಿಗೆ 500 ರೂ.ನೀಡುತ್ತಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.ಈ ಸಂಬಂಧ ಹೆಚ್ಚಿನ ಕಾರ್ಯಾಚರಣೆ ನಡೆಯುತ್ತದೆ.

See also  ಪ್ರಧಾನಿ ಮೋದಿ ಮತ್ತು ಸಿಎಂ ಸಿದ್ದರಾಮಯ್ಯ ಭೇಟಿಗೆ ಸಮಯ ನಿಗದಿ..! ಹಲವು ಸಚಿವರ ಜೊತೆ ಸಿಎಂ ದೆಹಲಿಗೆ ಪ್ರಯಾಣ..! ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget     Ad Widget   Ad Widget   Ad Widget   Ad Widget