ಕ್ರೀಡೆ/ಸಿನಿಮಾದೇಶ-ವಿದೇಶವೈರಲ್ ನ್ಯೂಸ್ಸಿನಿಮಾ

ರಾಕಿಂಗ್‌ ಸ್ಟಾರ್‌ ಜೊತೆ ಮಿಂಚಲಿರುವ ಬಾಲಿವುಡ್‌ ನಟಿ..! ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಸೇರಿದಂತೆ ಹಲವು ನಟಿಯರು ‘ಟಾಕ್ಸಿಕ್‌’ ನಲ್ಲಿ ಭಾಗಿ..!

232

ನ್ಯೂಸ್ ನಾಟೌಟ್: ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ‘ಟಾಕ್ಸಿಕ್‌’ ಸಿನಿಮಾದ ಬಗ್ಗೆ ಸದ್ಯ ಎಲ್ಲೆಡೆಯೂ ಕ್ರೇಜ್‌ ಹೆಚ್ಚಾಗಿದೆ. ಕೆಜಿಎಫ್‌-2 ಬಳಿಕ ತುಂಬಾ ಗ್ಯಾಪ್‌ ಆಗಿರುವುದರಿಂದ ರಾಕಿಭಾಯ್‌ ಯಶ್‌ ಅವರನ್ನು ತೆರೆ ಮೇಲೆ ನೋಡಬೇಕೆಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಕೆಲ ತಿಂಗಳ ಹಿಂದೆ ಮುಹೂರ್ತ ಮುಗಿಸಿದ್ದ ಟಾಕ್ಸಿಕ್‌ ತಂಡವು ಬಿಗ್‌ ಅಪ್ಡೇಟ್‌ ವೊಂದನ್ನು ನೀಡಿದೆ. ಟಾಕ್ಸಿಕ್‌ ಸಿನಿಮಾದಲ್ಲಿ ಈಗಾಗಲೇ ಸೌತ್‌ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಸೇರಿದಂತೆ ಹಲವು ನಟಿಯರು ಇರಲಿದ್ದಾರೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಇದೀಗ ಯಶ್‌ ಜೊತೆಗೆ ಬಾಲಿವುಡ್‌ ಬ್ಯೂಟಿ ಕಿಯಾರ ಅಡ್ವಾಣಿ ಕೂಡ ಟಾಕ್ಸಿಕ್‌ ಸಿನಿಮಾದಲ್ಲಿ ಯಶ್‌ ಜೊತೆ ನಟಿಸುತ್ತಿದ್ದಾರೆ.

ಈ ಬಗ್ಗೆ ಬಿಗ್‌ ಅಪ್ಡೇಟ್‌ ನೀಡಿರುವ ಚಿತ್ರತಂಡವು ಈ ತಿಂಗಳಾಂತ್ಯಕ್ಕೆ ಮುಂಬೈನಲ್ಲಿ ಶೂಟಿಂಗ್‌ ನಿಗದಿ ಮಾಡಿದೆ. ಕಿಯಾರಾ ಅಡ್ವಾನಿ ಹಾಗೂ ರಾಕಿಂಗ್‌ ಸ್ಟಾರ್‌ ಯಶ್‌ ಅವರ ರೊಮ್ಯಾಂಟಿಕ್‌ ಸನ್ನಿವೇಷಗಳ ಚಿತ್ರೀಕರಣ ನಡೆಯಲಿದೆ ಎಂದು ವರದಿಯಾಗಿದೆ. ಬರೋಬ್ಬರಿ ಒಂದು ತಿಂಗಳ ಕಾಲ ಮುಂಬೈನಲ್ಲಿ ಶೂಟಿಂಗ್‌ ನಡೆಯಲಿದೆ ಎನ್ನಲಾಗಿದೆ.

‘ಕೆಜಿಎಫ್‌ 1’ ಹಾಗೂ ‘ಕೆಜಿಎಫ್‌ 2’ ಸಿನಿಮಾಗಳು ನಟ ಯಶ್‌ ಅವರಿಗೆ ದೊಡ್ಡ ಹಿಟ್‌ ತಂದುಕೊಟ್ಟಿರುವ ಕಾರಣ ಮುಂದಿನ ಚಿತ್ರದ ಮೇಲೆ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

See also  ಮದುವೆ ಸಮಾರಂಭಕ್ಕೆ ಬಂದಿದ್ದ ಇಬ್ಬರು ಅಪ್ರಾಪ್ತೆಯರ ಕಿಡ್ನ್ಯಾಪ್‌ ಮಾಡಿದ ಗ್ಯಾಂಗ್..! ಗ್ಯಾಂಗ್‌ ರೇಪ್‌ ಮಾಡಿದ 4 ಮಂದಿ ಅರೆಸ್ಟ್..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget