ಕ್ರೀಡೆ/ಸಿನಿಮಾವೈರಲ್ ನ್ಯೂಸ್

ರಾಕಿ ಬಾಯ್ ರಾವಣನಾಗಿ ಅಬ್ಬರಿಸ್ತಾರಾ..? ನೆಗೆಟಿವ್ ಶೇಡ್ ಇರುವ ಪಾತ್ರಕ್ಕೆ ಯಶ್ ಒಪ್ಪಿಕೊಂಡದ್ದೇಕೆ? ಇಲ್ಲಿದೆ ಬಿಗ್ ಅಪ್ಡೇಟ್

243

ನ್ಯೂಸ್‌ನಾಟೌಟ್‌: ಕೆಜಿಎಫ್ 2′ (Kgf 2) ಯಶಸ್ಸಿನ ಬಳಿಕ ಯಶ್ ಅಭಿಮಾನಿಗಳು ಯಾಕಿ ಬಾಯ್ ಯನ್ನು ತೆರೆಯ ಮೇಲೆ ನೋಡಲು ಕಾದು ಕುಳಿತಿದ್ದಾರೆ. ಈ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೂ ಯಶ್ ಮುಂದಿನ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ.

ಹೀಗಿರುವಾಗ ಬಾಲಿವುಡ್‌ ನಿಂದ ರಾಕಿಂಗ್ ಸ್ಟಾರ್‌ಗೆ ಬಿಗ್ ಆಫರ್‌ವೊಂದು ಬಂದಿದೆ ಎನ್ನಲಾಗಿದೆ. ಬಾಲಿವುಡ್‌ನಲ್ಲಿ (Bollywood) ರಾಮಾಯಣ ಆಧರಿಸಿ ಸಿನಿಮಾ ಮಾಡಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಈ ಚಿತ್ರದಲ್ಲಿ ರಾಮನಾಗಿ ರಣ್‌ಬೀರ್ ಕಪೂರ್ (Ranbir Kapoor) ಫೈನಲ್ ಆಗಿದ್ರೆ ರಾವಣನಾಗಿ ಹೃತಿಕ್ ರೋಷನ್ ಫಿಕ್ಸ್ ಆಗಿತ್ತು. ಆದರೆ ಹೃತಿಕ್ ಚಿತ್ರತಂಡದಿಂದ ಹೊರಬಂದಿದ್ದಾರೆ.

ಅವರ ಬದಲು ಈಗ ಯಶ್‌ಗೆ (Yash) ರಾವಣನ ರೋಲ್ ಮಾಡುತ್ತಾರೆ ಎನ್ನಲಾಗಿದೆ. ರಾವಣ ನೆಗೆಟಿವ್ ಶೇಡ್ ಇರುವ ಪಾತ್ರವಾಗಿರುವ ಕಾರಣ, ಚಿತ್ರಕ್ಕೆ ಹೃತಿಕ್ ರೋಷನ್ ನೋ ಎಂದಿದ್ದಾರೆ. ಈಗ ರಾವಣನ ಪಾತ್ರಕ್ಕೆ ಯಶ್ ಅವರಿಗೆ ಆಫರ್ ನೀಡಲಾಗಿದೆ.

ಈ ಹಿಂದೆವಿಕ್ರಮ್ ವೇದ’ ಸಿನಿಮಾದಲ್ಲಿ ಹೃತಿಕ್ ನೆಗೆಟಿವ್ ಶೇಡ್‌ನಲ್ಲಿ ನಟಿಸಿದ್ದರು. ಈಗ ಮತ್ತೆ ಇಂತಹದ್ದೇ ಪಾತ್ರ ಬೇಡ ಎಂದು ನಟ ನೋ ಹೇಳಿದ್ದಾರೆ. ಹಾಗಾಗಿ `ಕೆಜಿಎಫ್ 2′ ಸ್ಟಾರ್‌ಗೆ ಈ ಆಫರ್ ನೀಡಲಾಗಿದೆ. ಈಗಾಗಲೇ ಈ ಸಿನಿಮಾ, ಪಾತ್ರದ ಬಗ್ಗೆ ಯಶ್ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ರಾವಣನಾಗಿ ಅಬ್ಬರಿಸಲು ಯಶ್ ತಯಾರಾಗಿದ್ದಾರೆ ಎನ್ನಲಾಗಿದೆ.

See also  ಮಂಗಳೂರು: ತಿರುಮಲ-ತಿರುಪತಿ ದೇವಸ್ಥಾನದಿಂದ ಬರೋಬ್ಬರಿ 10 ಲಕ್ಷ ಕೆಜಿ ನಂದಿನಿ ತುಪ್ಪಕ್ಕೆ ಬೇಡಿಕೆ..! ಬೇರೆ ಯಾವುದೇ ಕಂಪನಿಯ ತುಪ್ಪ ಬೇಡ ಎಂದ ಟಿಟಿಡಿ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget