ಕ್ರೈಂವಿಡಿಯೋವೈರಲ್ ನ್ಯೂಸ್

ಆ ಕಟ್ಟಡದಿಂದ ಈ ಕಟ್ಟಡಕ್ಕೆ ಏನಿದು ಹಾಸ್ಟೆಲ್ ಹುಡುಗರ ರಾಕೆಟ್ ವಾರ್? ಉಳಿದ ನಿವಾಸಿಗಳಿಗೆ ಫುಲ್ ಶಾಕ್! ಇಲ್ಲಿದೆ ವೈರಲ್ ವಿಡಿಯೋ

90
Spread the love

ನ್ಯೂಸ್ ನಾಟೌಟ್ : ಅಪಾಯಕಾರಿ ಪಟಾಕಿ ಸ್ಟಂಟ್‌ಗಳ ವೀಡಿಯೋ ದೀಪಾವಳಿ ಸಮಯದಲ್ಲಿ ವೈರಲ್ ಆಗುತ್ತಿದೆ. ದೀಪಾವಳಿ ರಜೆಗೆ ಮನೆಗೆ ಹೋಗದೇ ಹಾಸ್ಟೆಲ್‌ನಲ್ಲಿ ಉಳಿದ ವಿದ್ಯಾರ್ಥಿಗಳು ಆ ಕಟ್ಟಡದಿಂದ ಈ ಕಟ್ಟಡಕ್ಕೆ ಒಂದಾದ ಮೇಲೆ ಒಂದರಂತೆ ರಾಕೆಟ್ ಪಟಾಕಿಯನ್ನು ಹಾರಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ತಿಳಿದಿಲ್ಲ.ಈ ವೀಡಿಯೋ ಈಗ ಟ್ವಿಟ್ಟರ್‌ನಲ್ಲಿ ಸಖತ್ ವೈರಲ್ ಆಗಿದ್ದು, ಏಳು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಘರ್ ಕಲೇಶ್‌ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ತಾವಿದ್ದ ಕಟ್ಟಡದಿಂದ ಸಮೀಪದ ಕಟ್ಟಡಕ್ಕೆ ಪರಸ್ಪರ ರಾಕೆಟ್ ಪಟಾಕಿಗಳನ್ನು ಹಾರಿಸುತ್ತಿರುವುದನ್ನು ಕಾಣಬಹುದಾಗಿದೆ. ಇದು ಒಂದು ರೀತಿಯ ಯುದ್ಧದಂತೆ ಒಬ್ಬರಾದ ಮೇಲೆ ಒಬ್ಬರು ಪರಸ್ಪರ ಆ ಕಟ್ಟಡದಿಂದ ಈ ಕಟ್ಟಡಕ್ಕೆ ಪಟಾಕಿ ಹಾರಿಸುತ್ತಿದ್ದು, ಯುದ್ಧದಲ್ಲಿ ರಾಕೆಟ್ ದಾಳಿಯಂತೆ ಗೋಚರಿಸುತ್ತಿದೆ.


19 ಸೆಕೆಂಡ್‌ಗಳ ಈ ವೀಡಿಯೋ ನೋಡಿದ ಅನೇಕರು ಇಸ್ರೇಲ್ ಹಮಾಸ್ ಯುದ್ಧವನ್ನು ಭಾರತದಲ್ಲಿ ರಿಕ್ರಿಯೇಟ್ ಮಾಡಲಾದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬಹುಶಃ ಹಾಸ್ಟೆಲ್‌ನಲ್ಲಿ ವಾರ್ಡನ್‌ ಇರಲಿಲ್ಲ ಎನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಹಾಸ್ಟೆಲ್ ದಿನಗಳು ಎಷ್ಟು ಮಜಾವಾಗಿರುತ್ತವೆ ಎಂಬುದನ್ನು ಹಾಸ್ಟೆಲ್‌ನಲ್ಲಿ ದಿನ ಕಳೆದವರನ್ನೇ ಕೇಳಿ ನೋಡಿ ಮಜಾವಾಗಿ ವಿವರಿಸುತ್ತಾರೆ. ಈ ಬಗ್ಗೆ ಹಲವರು ಕ್ರಮ ಕೈಗೊಳ್ಳುವಂತೆ ಆಗ್ರಿಸಿದ್ದಾರೆ.

See also  ಸಂಪಾಜೆ: ಇಬ್ಬರು ವಿವಾಹಿತ ಮಹಿಳೆಯರು ದಿಢೀರ್ ನಾಪತ್ತೆ
  Ad Widget   Ad Widget   Ad Widget   Ad Widget   Ad Widget   Ad Widget