ಕ್ರೈಂರಾಜ್ಯವೈರಲ್ ನ್ಯೂಸ್ಸುಳ್ಯ

ಮರ್ಕಂಜ: ಕಲ್ಲುಕೋರೆಯಿಂದ ಜಲ್ಲಿ ಸಾಗಾಟಕ್ಕೆ ಯತ್ನ, ಲಾರಿ ಸಹಿತ ಜಲ್ಲಿ ಲೋಡ್ ತಡೆ ಹಿಡಿದ ಸ್ಥಳೀಯರು, ಪೊಲೀಸರ ಆಗಮನ

ನ್ಯೂಸ್ ನಾಟೌಟ್: ಕಳೆದ ಕೆಲವು ವರ್ಷಗಳಿಂದ ಮರ್ಕಂಜದ ಅಳವುಪಾರೆ ಕಲ್ಲುಕೋರೆಯಲ್ಲಿ ವಿಪರೀತ ಗಣಿಗಾರಿಕೆ ನಡೆಸುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಈ ವಿಚಾರವನ್ನು ಇತ್ತೀಚೆಗೆ ಸ್ಥಳೀಯರು ಪ್ರಬಲವಾಗಿ ವಿರೋಧಿಸಿದ್ದಾರೆ. ಮಾತ್ರವಲ್ಲ ಇತ್ತೀಚೆಗೆ ಸ್ಥಳೀಯರ ಒತ್ತಡಕ್ಕೆ ಮಣಿದು ಸ್ವತಃ ತಹಶೀಲ್ದಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು.

ಗಣಿಗಾರಿಕೆಗೆ ತಾತ್ಕಾಲಿಕ ತಡೆ ನೀಡಿದ್ದರು. ಈ ಬೆನ್ನಲ್ಲೇ ಸ್ಟಾಕ್ ಆಗಿದ್ದ ಜಲ್ಲಿ ಕಲ್ಲುಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದ ಲಾರಿಯನ್ನು ಸ್ಥಳೀಯರು ತಡೆ ಹಿಡಿದಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ.

Related posts

ರಾಷ್ಟ್ರಪತಿ ಭಾಷಣದ ವೇಳೆ ವಿದ್ಯುತ್ ಕಡಿತ..! ಇಲ್ಲಿದೆ ವಿಡಿಯೋ

ಬೆಳ್ತಂಗಡಿ: ರಿಕ್ಷಾ, ಕಾರು, ಪಿಕಪ್ ಮಧ್ಯೆ ಸರಣಿ ಅಪಘಾತ, ರಿಕ್ಷಾ ಚಾಲಕನಿಗೆ ಗಾಯ

ಕಾರವಾರದಲ್ಲಿ ಬಲೆಗೆ ಬಿತ್ತು ದೇಶದ ಅತಿದೊಡ್ಡ ಬಂಗುಡೆ ಮೀನು..!, ಬೃಹತ್‌ ಗಾತ್ರದ ಬಂಗುಡೆ ಮೀನಿನ ಉದ್ದ ಎಷ್ಟಿದೆ ಗೊತ್ತಾ..?