ಕ್ರೈಂವೈರಲ್ ನ್ಯೂಸ್

ಕಳೆದುಹೋದ ವಸ್ತುಗಳನ್ನು ಪತ್ತೆ ಹಚ್ಚುತ್ತದೆ ಈ ರೋಬೋಟ್..! ಇಲ್ಲಿದೆ ಅಚ್ಚರಿ ಮೂಡಿಸುವ ತಂತ್ರಜ್ಞಾನ!

ನ್ಯೂಸ್ ನಾಟೌಟ್ :  ಕೆನಡಾದ ವಾಟರ್​ ಲೂ ವಿಶ್ವವಿದ್ಯಾಲಯದ ಸಂಶೋಧಕರ ತಂಡ ವಸ್ತುಗಳನ್ನು ಪತ್ತೆ ಹಚ್ಚಲು ಹೊಸ ರೋಬೋಟ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ ಎನ್ನಲಾಗಿದೆ. ಈ ರೋಬೋಟ್​ ಆರ್ಟಿಫಿಶಿಯಲ್​ ಮೆಮೊರಿ ತಂತ್ರಜ್ಞಾನದ ಮೂಲಕ ಕಾರ್ಯನಿರ್ವಹಿಸುತ್ತದೆ.

ಈ ಬಗ್ಗೆ ಮಾಹಿತಿ ನೀಡಿದ ಸಂಶೋಧಕ ಡಾ.ಅಲಿ ಅಯೂಬ್, ಒಬ್ಬ ಬಳಕೆದಾರ ಕೇವಲ ರೋಬೋಟ್​ ಜೊತೆಗೆ ಇರುವುದನ್ನು ಹೊರತುಪಡಿಸಿ ಇದು ನಮ್ಮ ವೈಯಕ್ತಿಕ ​ಒಡನಾಡಿಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು. ಅನೇಕರು ದಿನನಿತ್ಯದ ವಸ್ತುಗಳ ಇಟ್ಟ ಸ್ಥಳವನ್ನು ಪದೇ ಪದೇ ಮರೆಯುತ್ತಾರೆ. ಇದಕ್ಕೆ ಪರಿಹಾರವಾಗಿ ರೋಬೋಟ್​ನ್ನು ಬಳಸಿ ವಸ್ತುಗಳನ್ನು ಪತ್ತೆಹಚ್ಚಲು ಸಹಕಾರಿಯಾಗುತ್ತದೆ.

ಈ ರೋಬೋಟ್​ ಎಪಿಸೋಡಿಕ್​ ಮೆಮೊರಿ ಮೂಲಕ ಕಾರ್ಯ ನಿರ್ವಹಿಸುತ್ತದೆ. ಅಂದರೆ ದೈನಂದಿನ ಕಾರ್ಯಗಳನ್ನು ಈ ರೋಬೋಟ್​ನ ಮೆಮೊರಿಯಲ್ಲಿ ಇರಿಸಲಾಗುತ್ತದೆ. ಅಲ್ಲದೆ ಇದರಲ್ಲಿ ಆರ್ಟಿಫಿಷಿಯಲ್​ ಇಂಟೆಲಿಜೆನ್ಸ್​ನ್ನು ಬಳಕೆ ಮಾಡಿ ಹೊಸ ರೀತಿಯ ಆರ್ಟಿಫಿಷಿಯಲ್​ ಮೆಮೊರಿಯನ್ನು ಅಳವಡಿಸಲಾಗುತ್ತದೆ. ಈ ರೋಬೋಟ್​ ತನ್ನ ಸುತ್ತಲಿನ ಪರಿಸರವನ್ನು ಗಮನಿಸಲು ಕ್ಯಾಮೆರಾವನ್ನು ಹೊಂದಿದೆ.

ಅಲ್ಲದೆ ಈ ರೋಬೋಟ್ ಆಬ್ಜೆಕ್ಟ್​ ಡಿಟೆಕ್ಷನ್ ತಂತ್ರಜ್ಞಾನದ ಮೂಲಕ ವಸ್ತುಗಳನ್ನು ಗುರುತಿಸುತ್ತದೆ. ರೋಬೋಟ್​ನ ಮೆಮೊರಿಯಲ್ಲಿ ದೈನಂದಿನ ಚಟುವಟಿಕೆ ವಸ್ತುಗಳ ಬಗ್ಗೆ ಮಾಹಿತಿಯನ್ನು ತುಂಬಲಾಗಿರುತ್ತದೆ. ಅಷ್ಟೇ ಅಲ್ಲದೆ ತನ್ನಲ್ಲಿ ಅಳವಡಿಸಿರುವ ಕ್ಯಾಮೆರಾದ ಮೂಲಕ ವಿವಿಧ ವಸ್ತುಗಳನ್ನು ಗ್ರಹಿಸಲು ರೋಬೋಟ್​ಗೆ ಸಾಧ್ಯವಾಗುತ್ತದೆ. ರೋಬೋಟ್​ನ ಕಣ್ಣಿಗೆ ಬಿದ್ದ ವಸ್ತುಗಳ ಸಮಯ ಮತ್ತು ದಿನಾಂಕವನ್ನು ಇದು ತನ್ನಲ್ಲಿ ನಮೂದಿಸಿಕೊಳ್ಳುತ್ತದೆ ಎನ್ನಲಾಗಿದೆ.

ಇನ್ನು, ಬಳಕೆದಾರ ವ್ಯಕ್ತಿಯು ಕಳೆದುಕೊಂಡ ವಸ್ತುಗಳ ಬಗ್ಗೆ ರೋಬೋಟ್​ನ ಗ್ರಾಫಿಕ್​ ಇಂಟರ್​ಫೇಸ್​ ಮೇಲೆ ಟೈಪ್​ ಮಾಡಿದಾಗ, ಅಥವಾ ಇದಕ್ಕೆ ಹೊಂದಿಕೊಂಡಿರುವ ಫೋನ್​ ಮೂಲಕ ಮತ್ತು ಕಂಪ್ಯೂಟರ್​ ಮೂಲಕ ನಾವು ವಸ್ತುಗಳ ಹೆಸರನ್ನು ನಮೂದಿಸಿದರೆ ಇದು ನಿರ್ದಿಷ್ಟವಾಗಿ ವಸ್ತು ಇರುವ ಸ್ಥಳವನ್ನು ನಮಗೆ ತಿಳಿಸುತ್ತದೆ. ಈ ರೋಬೋಟಿಕ್ ಪ್ರಯೋಗವು ಯಶಸ್ವಿಯಾಗಿದೆ ಎನ್ನಲಾಗಿದೆ.

Related posts

ಬಿಗ್ ಬಾಸ್ ಸ್ಪರ್ಧಿ ಪ್ರೆಗ್ನೆಂಟ್..? ಈ ಬಗ್ಗೆ ಆಕೆ ಹೇಳಿದ್ದೇನು? ಆಕೆಯನ್ನು ಮನೆಯಿಂದ ಹೊರ ಹಾಕಲು ತಯಾರಿ ನಡೆಯುತ್ತಿದೆಯಾ?

ರೆಸ್ಟೋರೆಂಟ್‌ನಲ್ಲಿ ಗಲಾಟೆ ಎಬ್ಬಿಸಿದ ಮಹಿಳೆ! ಕೇಳಲು ಬಂದ ಪೊಲೀಸರ ಹೆಬ್ಬೆರಳು ಕಚ್ಚಿ ತಿರುಚಿದ ಆಕೆಗೆ ಮುಂದೇನಾಯ್ತು?

ಜಾತಿ ಗಣತಿ ಅನುಷ್ಠಾನಕ್ಕೆ ಒಕ್ಕಲಿಗರ ಸ್ವಾಮೀಜಿ ತೀವ್ರ ವಿರೋಧ..! ಈ ಬಗ್ಗೆ ಸ್ವಾಮೀಜಿ ಹೇಳಿದ್ದೇನು..?