ಕರಾವಳಿ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ 15 ಲಕ್ಷ ರೂ. ವಿಮಾ ಹಣವನ್ನು ವಂಚಿಸಿದ ವಕೀಲ

784

ಮಂಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಯುವಕನ 15 ಲಕ್ಷ ರೂ. ವಿಮಾ ಹಣವನ್ನು ವಂಚಿಸಿದ ವಕೀಲನ ವಿರುದ್ಧ ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಂಚಿಸಿದ ವಕೀಲನನ್ನು ಡಿ. ಪದ್ಮನಾಭ ಎಂದು ಗುರುತಿಸಲಾಗಿದೆ. ದಿವಾಕರ ಆಚಾರ್ಯ ಮತ್ತು ಶಕುಂತಲಾ ದಂಪತಿಯ ಪುತ್ರ ಶರಣ್ ಬೆಂಗಳೂರಿನ ಪೀಣ್ಯದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ, ಆದರೆ ಯುವಕನ ಇನ್ಸೂರೆನ್ಸ್ ಹಣಕ್ಕೆ ಕನ್ನ ಹಾಕಿ ಕಂಪನಿಯ ನಕಲಿ ಖಾತೆ ಸೃಷ್ಟಿಸಿ 15 ಲಕ್ಷ ಕಂಪನಿ ವಿಮಾ ಹಣ ಪದ್ಮನಾಭ ಪಡೆದಿದ್ದ ಎನ್ನಲಾಗಿದೆ. ವಂಚನೆಗೆ ಒಳಗಾದ ಸಂತ್ರಸ್ತ ಕುಟುಂಬ, ವಕೀಲ ಪದ್ಮನಾಭ ವಿರುದ್ಧ ಮಂಗಳೂರಿನ ಬಂದರು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

See also  ವೈದ್ಯಕೀಯ ಕ್ಷೇತ್ರದಲ್ಲಿ ನಿರಂತರ ಕಲಿಕೆ ಅಗತ್ಯ : ಡಾ|ಕೆ.ವಿ. ಚಿದಾನಂದ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget