ಬೆಂಗಳೂರು

24 ಲಕ್ಷ ರೂ. ಮೌಲ್ಯದ ಹೊಸ ಬೈಕ್‌ನಲ್ಲಿ ಅಡಗಿ ಕುಳಿತಿದ್ದ ಯಮರಾಯ..!ವ್ಹೀಲಿಂಗ್‌ ಮಾಡುತ್ತಾ ಅತಿ ವೇಗವಾಗಿ ಬಂದಿದ್ದ ಬೈಕ್‌ ಸವಾರ ಸ್ಥಳದಲ್ಲೇ ದುರಂತ ಅಂತ್ಯ,ಏನಿದು ಘಟನೆ?

144

ನ್ಯೂಸ್ ನಾಟೌಟ್ : ಹೊಸ ಬೈಕ್‌ ಕ್ರೇಜ್‌ನಿಂದಾಗಿ ಯುವಕನೋರ್ವ ದುರಂತ ಅಂತ್ಯ ಕಂಡಿರುವ ಘಟನೆ ಬೆಂಗಳೂರಿನ ಜಯನಗರ ಅಶೋಕ ಪಿಲ್ಲರ್ ಎಂಬಲ್ಲಿಂದ ವರದಿಯಾಗಿದೆ.24 ಲಕ್ಷ ರೂ. ಮೌಲ್ಯದ ಬೈಕ್ ಇದಾಗಿದ್ದು, ರಸ್ತೆಯಲ್ಲಿ ವ್ಹೀಲಿಂಗ್‌ ಮಾಡುತ್ತಾ ಅತಿ ವೇಗವಾಗಿ ಬಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದರು ಎನ್ನಲಾಗಿದೆ.

ಬೈಕ್‌ ಸವಾರ ಶೇಕ್ ನಾಸಿರ್ (32) ಕೊನೆಯುಸಿರೆಳೆದ ಯುವಕ.ಹಿಂಬದಿ ಬೈಕ್‌ ಸವಾರ ಸೈಯದ್ ಮುದಾಸಿರ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.ಬೈಕ್ ಸವಾರರು ದುಬಾರಿ ಬೆಲೆಯ ಬಿಎಂಡಬ್ಲ್ಯೂ ಆರ್‌ಆರ್ 1000 ಸಿಸಿ (BMW RR 1000CC Bike) ಚಲಾಯಿಸುತ್ತಿದ್ದರು. ವ್ಹೀಲಿಂಗ್‌ ಮಾಡುತ್ತಾ ಅತಿ ವೇಗವಾಗಿ ಚಲಾಯಿಸುತ್ತಿದ್ದಾರೆ ಎನ್ನಲಾಗಿದೆ.ಡಿಕ್ಕಿಯ ಪರಿಣಾಮ ಓರ್ವ ಯುವಕ , ಬೈಕ್ ಚಲಾಯಿಸುತ್ತಿದ್ದಾತ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ. ಮತ್ತೊಬ್ಬನ ಸ್ಥಿತಿ ಗಂಭೀರವಾಗಿದ್ದು,ಬೈಕ್‌ ಸವಾರರು ಹೆಲ್ಮೆಟ್‌ ಕೂಡ ಧರಿಸಿರಲಿಲ್ಲ ಎನ್ನಲಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸವಾರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಕಾರಿನ ಮುಂಭಾಗ ಹಾನಿಗೀಡಾಗಿದ್ದು, ಗಾಜು ಒಡೆದಿದೆ. ಕಾರಿನಲ್ಲಿದ್ದವರಿಗೆ ಗಾಯವಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

See also  ಚಿಂದಿ ಆಯುವ ವ್ಯಕ್ತಿ ಕೈ ಸೇರಿದ 30 ಲಕ್ಷ ರೂ.ಇದ್ದ ಪ್ಲ್ಯಾಸ್ಟಿಕ್ ಬ್ಯಾಗ್..!ಮುಂದೇನಾಯ್ತು?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget