ಕ್ರೈಂದೇಶ-ವಿದೇಶರಾಜಕೀಯ

ವಾಕಿಂಗ್ ಹೋಗುತ್ತಿದ್ದ ರಾಜಕೀಯ ನಾಯಕನ ಮೇಲೆ ಗುಂಡಿನ ಸುರಿಮಳೆ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

253

ನ್ಯೂಸ್ ನಾಟೌಟ್: ವಾಕಿಂಗ್ ಹೊರಟಿದ್ದ ಪ್ರಮುಖ ಪಕ್ಷದ ರಾಜಕೀಯ ನಾಯಕರೊಬ್ಬರ ಮೇಲೆ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ವಾಕಿಂಗ್ ಹೊರಟಿದ್ದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಪಂಕಜ್ ಯಾದವ್ ಗುಂಡಿನ ದಾಳಿಗೆ ತುತ್ತಾದವರು.

ಮುಂಗೇರ್ ನಲ್ಲಿ ಗುರುವಾರ (ಅ.3) ರಂದು ಮುಂಜಾನೆ ಸಂಭವಿಸಿದೆ.ಘಟನೆಯಿಂದ ಪಂಕಜ್ ಯಾದವ್ ಅವರ ಸ್ಥಿತಿ ಗಂಭೀರವಾಗಿದೆ. ಕೂಡಲೇ ಅಲ್ಲಿನ ಸ್ಥಳೀಯರು ಪಂಕಜ್ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಆರ್‌ಜೆಡಿ ಮಾಜಿ ಶಾಸಕ ವಿಜಯ್ ಕುಮಾರ್, ಯಾದವ್ ಅವರು ಪ್ರತಿದಿನ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದರು.

ಈ ನಡುವೆ ಬೈಕ್ ನಲ್ಲಿ ಬಂದ ಇಬ್ಬರು ಯಾದವ್ ಅವರನ್ನು ಸುಮಾರು ಒಂದು ಕಿಲೋಮೀಟರ್ ದೂರದ ವರೆಗೆ ಹಿಂಬಾಲಿಸಿ ಬಳಿಕ ಹಲವು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಆದರೆ ಈ ವೇಳೆ ಯಾದವ್ ಅವರು ದಾಳಿಕೋರರಿಂದ ತಪ್ಪಿಸ್ಕೊಳ್ಳಲು ಯತ್ನಿಸಿದ್ದಾರೆ ಈ ನಡುವೆ ಒಂದು ಗುಂಡು ಅವರ ಎದೆಗೆ ಹೊಕ್ಕಿದೆ ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಅಲ್ಲಿನ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಯಾದವ್ ಅರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

Click

https://newsnotout.com/2024/10/radha-krishna-statue-kannada-news-god-theef-returns-the-statuee/
https://newsnotout.com/2024/10/mobile-adiction-kannada-news-mother-and-son-viral-cctv-video/
https://newsnotout.com/2024/10/father-love-on-son-and-bike-got-burned-kannada-news-viral-news/
https://newsnotout.com/2024/10/bandage-kannada-news-doctor-nomore-delhi-viral-news-minor/
https://newsnotout.com/2024/10/prof-bhagavan-and-chamundeshwari-kannada-news-kalladka-prbhakar-bhat/
See also  ರಾಮನ ಹೆಸರು ಇರೋದಕ್ಕೆ ರಾಮೇಶ್ವರಂ ಹೋಟೆಲ್ ಟಾರ್ಗೆಟ್ ಮಾಡಿದ್ದಾರೆ ಎಂದ ಯತ್ನಾಳ್..! ಗ್ಯಾರಂಟಿ ಕೊಟ್ಟ ಸರ್ಕಾರದಿಂದ ಜನರ ಜೀವಕ್ಕೆ ಗ್ಯಾರಂಟಿ ಇಲ್ಲ ಎಂದ ಶಾಸಕ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget