ನ್ಯೂಸ್ ನಾಟೌಟ್ : ವ್ಯಕ್ತಿಯೊಬ್ಬರು ದೋಣಿಯಲ್ಲಿ ನದಿಗೆ ಇಳಿದು ನೀರಿನಲ್ಲಿ ಮಜಾ ಮಾಡುತ್ತಿದ್ದರು. ನೀರಿನ ಕೆಳಗಿರುವ ಅಪಾಯದ ಅರಿವಿಲ್ಲದೆ ಶರ್ಟ್ ಬಿಚ್ಚಿಕೊಂಡಿದ್ದ ವ್ಯಕ್ತಿ ನೀರಿನಲ್ಲಿ ಒಮ್ಮೆಲೆ ಬೆಚ್ಚಿಬಿದ್ದಿದ್ದಾರೆ.
ತಂಪಾದ ನೀರನ್ನು ಆನಂದಿಸುತ್ತಿರುವಾಗ ಇದ್ದಕ್ಕಿದ್ದಂತೆ ಕಾಲಿಗೇನೋ ತಾಗಿತೆಂದು ಕೈಯಲ್ಲಿ ಹಿಡಿದು ನೋಡಿದಾಗ ಅದು ಮೀನಾಗಿರಲಿಲ್ಲ, ಮೊಸಳೆಯಾಗಿತ್ತು. ತಕ್ಷಣ ಭಯದಿಂದ ಅದನ್ನು ದೂರ ಎಸೆದು ಓಡಿಬಂದು ದೋಣಿಹತ್ತಿ ಬಜಾವಾಗುವ ದೃಶ್ಯ ಒಮ್ಮೆಲೆ ಯಾರನ್ನಾದರೂ ಭಯಗೊಳಿಸುವಂತಿದೆ.
View this post on Instagram
ಈ ವೈರಲ್ ವೀಡಿಯೊ ಅಪ್‌ಲೋಡ್ ಆದ ಎರಡೇ ದಿನಗಳಲ್ಲಿ 637,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ, ಈ ರೋಮಾಂಚಕಾರಿ ವೀಡಿಯೊ ಪ್ರಕೃತಿ ಅನಿರೀಕ್ಷಿತ ಎಂಬುದನ್ನು ನೆನಪಿಸುತ್ತದೆ.