Uncategorized

ಮನೆ ಕಳೆದುಕೊಂಡ ಕನ್ನಡದ ಖ್ಯಾತ ಸಿನಿಮಾ ನಟನಿಗೆ ವಾಪಾಸ್ ಮನೆ ಕೊಡಿಸ್ತಾರಾ ರಿಷಭ್ ಶೆಟ್ಟಿ..?

ನ್ಯೂಸ್ ನಾಟೌಟ್: ಕ್ರೇಜಿಸ್ಟಾರ್‌ ರವಿಚಂದ್ರನ್ ಆ ದಿನಗಳಲ್ಲಿ ಸಿನಿಮಾಗಳಿಗೇ ಸೈ ಅನಿಸುವ ಸಿನಿಮಾವನ್ನು ಮಾಡಿ ತೋರಿಸಿದ ರಣಧೀರ. ಇಂದಿಗೂ ರವಿಚಂದ್ರನ್ ಅಂದ್ರೆ ಸಿನಿಮಾ ಇಂಡಸ್ಟ್ರಿಯಲ್ ಬಹಳಷ್ಟು ಹೆಸರಿದೆ. ಅಂತಹ ನಾಯಕ ಈಗ ಆರ್ಥಿಕವಾಗಿ ಬಹಳಷ್ಟು ಸಂಕಷ್ಟದಲ್ಲಿದ್ದಾರೆ. ಇತ್ತೀಚೆಗೆ ಅವರು ಮನೆಯನ್ನೂ ಮಾರಿರುವ ವಿಚಾರವನ್ನು ವಾಹಿನಿಯೊಂದರಲ್ಲಿ ಕಣ್ಣೀರಿಡುತ್ತಾ ಹೇಳಿದ್ದರು. ಇದೀಗ ಸಂಕಷ್ಟದಲ್ಲಿರುವ ರವಿಚಂದ್ರನ್ ನೆರವಿಗೆ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಭ್ ಶೆಟ್ಟಿ ಧಾವಿಸಿದ್ದಾರೆ ಅನ್ನುವಂತಹ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ರಿಷಭ್ ಶೆಟ್ಟಿ ಅವರು ರವಿಚಂದ್ರನ್ ಅವರಿಗೆ ಅವರು ಮಾರಿರುವ ಮನೆಯನ್ನು ವಾಪಸ್ ಅವರಿಗೆ ನೀಡಲಿದ್ದಾರೆ ಎನ್ನುವಂತಹ ಸುದ್ದಿಗಳು ಹರಿದಾಡುತ್ತಿವೆ. ಮೂಲಗಳ ಪ್ರಕಾರ ರವಿಚಂದ್ರನ್ ಅವರಿಗೆ ಆರ್ಥಿಕ ಸಹಾಯ ಮಾಡುವುದಕ್ಕೆ ರಿಷಭ್‌ ಮುಂದೆ ಹೋದಾಗ ಅವರು ನಯವಾಗಿಯೇ ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ರಿಷಭ್ ಅವರು ನಿಮಗೆ ಆದಾಗ ಹಣವನ್ನು ವಾಪಸ್ ನೀಡಿ ಎಂದು ರವಿಚಂದ್ರನ್ ಅವರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಇದುವರೆಗೆ ರಿಷಭ್‌ ಶೆಟ್ಟಿ ಆಗಲಿ ಅಥವಾ ರವಿಚಂದ್ರನ್ ಅವರೇ ಆಗಲಿ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಸದ್ಯ ಈ ಬಗ್ಗೆ ರಿಷಭ್‌ ಶೆಟ್ಟಿ ಸ್ಪಷ್ಟನೆ ನೀಡಬೇಕು ಅಂತಿದ್ದಾರೆ ಫ್ಯಾನ್ಸ್‌. ಇದೆಲ್ಲದರ ನಡುವೆ ಕಾಂತಾರ ಕೆಜಿಎಫ್ ಸಿನಿಮಾದ ಎಲ್ಲ ದಾಖಲೆಗಳನ್ನು ಪುಡಿಗಟ್ಟಿ ಮುನ್ನುಗ್ಗುತ್ತಿದೆ. ಕನ್ನಡ, ಹಿಂದಿ, ತಮಿಳು, ತೆಲುಗು , ಮಲೆಯಾಳಂ ಹೀಗೆ ಎಲ್ಲ ಭಾಷೆಯಲ್ಲೂ ಭರ್ಜರಿಯಾಗಿ ಓಡುತ್ತಿದೆ. ದಕ್ಷಿಣ ಕನ್ನಡದ ದೈವಾರಾಧನೆ ಕುರಿತ ಕಥಾಹಂದರವಿರುವ ಸಿನಿಮಾ ಭಾಷೆಯ ಎಲ್ಲೆಯನ್ನು ಮೀರಿ ಪ್ರದರ್ಶನ ಕಾಣುತ್ತಿರುವುದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Related posts

1996ರ ಬಳಿಕ ಮೊದಲ ಬಾರಿಗೆ ಕರ್ನಾಟಕ ಹೈಕೋರ್ಟ್ ಗೆ ಕನ್ನಡಿಗ ಮುಖ್ಯ ನ್ಯಾಯಮೂರ್ತಿ..! ಇಲ್ಲಿದೆ ಸಂಪೂರ್ಣ ಮಾಹಿತಿ

ಭಿಕ್ಷೆ ನೀಡುವವರ ವಿರುದ್ಧ ಎಫ್‌.ಐ.ಆರ್ ದಾಖಲಿಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿ..!ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ..!

ಒಳಚರಂಡಿ ಕಾಮಗಾರಿ ವೇಳೆ ಜೈನ ಶಿಲ್ಪಗಳು ಪತ್ತೆ..!ಪತ್ತೆಯಾಗಿದ್ದೆಲ್ಲಿ?