ಕರಾವಳಿಕ್ರೀಡೆ/ಸಿನಿಮಾವೈರಲ್ ನ್ಯೂಸ್

ನಟ ರಿಷಬ್ ಶೆಟ್ಟಿ ಕಾರು ತಪಾಸಣೆ ನಡೆಸಿದ್ದೇಕೆ ಪೊಲೀಸರು? ಗೋವಾದಿಂದ ಬರುತ್ತಿದ್ದ ಕಾಂತರದ ಶಿವನಿಗೆ ಶಾಕ್ ಕೊಟ್ರಾ ಪೊಲೀಸರು?

244

ನ್ಯೂಸ್‌ ನಾಟೌಟ್‌: ನಟ, ನಿರ್ದೇಶಕ ರಿಷಬ್ ಶೆಟ್ಟಿ ಗೋವಾದಲ್ಲಿ ಪ್ರತಿಷ್ಠಿತ IFFI ಪ್ರಶಸ್ತಿ ಪಡೆದಿದ್ದಾರೆ. ಇದೇ ಖುಷಿಯಲ್ಲಿ ರಾಜ್ಯಕ್ಕೆ ಬರುತ್ತಿದ್ದ ಅವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಗೋವಾದಿಂದ ಬರುತ್ತಿದ್ದ ಕಾರನ್ನು ಕಾರವಾರದ ಮಾಜಾಳಿ ಚೆಕ್‌ ಪೋಸ್ಟ್‌ನಲ್ಲಿ ತಡೆಯಲಾಗಿದೆ.

ಮಾಜಾಳಿ ಚೆಕ್‌ ಪೋಸ್ಟ್‌ನಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ ನಟ ರಿಷಬ್ ಶೆಟ್ಟಿ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ. ನಿಯಮದಂತೆ ಗೋವಾದಿಂದ ರಾಜ್ಯಕ್ಕೆ ಬರುವ ಪ್ರತಿ ವಾಹನವನ್ನು ತಡೆದು ಪರಿಶೀಲನೆ ನಡೆಸಲಾಗುತ್ತದೆ. ಇದೇ ರೀತಿ ಅವರ ಕಾರನ್ನು ತಡೆದು ತಪಾಸಣೆ ನಡೆಸಲಾಗಿದೆ.

ಗೋವಾ 54ನೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದ ನಟ ರಿಷಬ್ ಶೆಟ್ಟಿಗೆ ಕಾಂತಾರ ಸಿನಿಮಾಗಾಗಿ ಪ್ರಶಸ್ತಿ ದೊರೆತಿದೆ. ‘ಕಾಂತಾರ’ ಸಿನಿಮಾಗಾಗಿ ರಿಷಬ್ ಶೆಟ್ಟಿ ಸಿಲ್ವರ್ ಪೀಕಾಕ್ ಸ್ಪೆಷಲ್ ಜ್ಯೂರಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಪಡೆದು ಕುಂದಾಪುರಕ್ಕೆ ಕಾರಾವಾರ ಮಾರ್ಗವಾಗಿ ವಾಪಸ್ ಬರುತ್ತಿದ್ದರು. ಈ ವೇಳೆ ಅಬಕಾರಿ ಇಲಾಖೆ ಸಿಬ್ಬಂದಿ ಕಾರು ತಡೆದಿದ್ದಾರೆ.

ಕಾರು ತಪಾಸಣೆ ತಡೆದು ಒಳಗಿರುವವರು ರಿಷಬ್ ಶೆಟ್ಟಿ ಎಂದು ತಿಳಿದು ಪೊಲೀಸರು ಕೂಡ ಖುಷಿ ಪಟ್ಟಿದ್ದಾರೆ. ಕಾರಿನಿಂದ ಇಳಿದ ರಿಷಬ್ ಶೆಟ್ಟಿ ಸಿಬ್ಬಂದಿಯನ್ನು ಮಾತನಾಡಿಸಿದ್ದಾರೆ. ಅವರ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ.

ಕಾಂತಾರ ಅಬ್ಬರದ ಬಳಿಕ ಮತ್ತೆ ಕಾಂತಾರ ಪ್ರೀಕ್ವೆಲ್ ಅಬ್ಬರ ಆರಂಭ ರಿಷಬ್ ಶೆಟ್ಟಿಯನ್ನು ಪ್ಯಾನ್ ಇಂಡಿಯಾ ಸ್ಟಾರ್ ಮಾಡಿರುವ ‘ಕಾಂತಾರ’ ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಗೋವಾ 54ನೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಪಡೆದಿದೆ. ಕಾಂತಾರ’ ಚಿತ್ರದಲ್ಲಿನ ತಮ್ಮ ನಿರ್ದೇಶನ ಹಾಗೂ ನಟನೆಗಾಗಿ ರಿಷಬ್ ಪ್ರಶಸ್ತಿ ಸ್ವೀಕರಿಸಿದ್ದಾರೆ.

See also  34 ವರ್ಷಗಳ ಹಿಂದೆ 1 ಬಿಯರ್​ ಬಾಟಲ್​ ಬೆಲೆ ಎಷ್ಟಿತ್ತು ಗೊತ್ತಾ..? 1989 ರಲ್ಲಿ ಬಿಯರ್ ಖರೀದಿಸಿದ ಬಿಲ್ ವೈರಲ್..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget