ನ್ಯೂಸ್ ನಾಟೌಟ್: ಬಾವಿಗೆ ರಿಂಗ್ ಹಾಕುತ್ತಿದ್ದ ಕಾರ್ಮಿಕ ಆಯತಪ್ಪಿ 50 ಅಡಿ ಆಳಕ್ಕೆ ಬಿದ್ದು ದಾರುಣ ಸಾವಿಗೀಡಾಗಿರುವ ಘಟನೆ ಕುಂದಾಪುರದ ಮೂಡುಗೋಪಾಡಿ ಎಂಬಲ್ಲಿ ಮೇ29ರಂದು ಮಧ್ಯಾಹ್ನ ನಡೆದಿದೆ.
ಮೃತಪಟ್ಟವರನ್ನು ಸುಬಾಷ್ ಪೂಜಾರಿ (50 ವರ್ಷ) ಎಂದು ಗುರುತಿಸಲಾಗಿದೆ.
ಮೃತದೇಹವನ್ನು ಹೊರಗೆ ತೆಗೆಯುವಲ್ಲಿ ಕುಂದಾಪುರದ ಅಗ್ನಿಶಾಮಕ ಪಡೆ ಅವಿರತ ಶ್ರಮವಹಿಸಿದೆ. ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ಕಾರ್ಯಾಚರಣೆ ನಡೆಸಿ ಬಾವಿಯ ಕೆಸರಿನೊಳಗೆ ಹುದುಗಿದ್ದ ಮೃತದೇಹವನ್ನು ಹೊರಕ್ಕೆ ತೆಗೆದು ಅದನ್ನು ಕುಟುಂಬಕ್ಕೆ ಹಸ್ತಾಂತರಿಸುವ ಕೆಲಸವನ್ನು ಅಗ್ನಿಶಾಮಕ ಪಡೆ ಮಾಡಿದೆ.
View this post on Instagram
ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ಕುಂದಾಪುರದ ಅಗ್ನಿಶಾಮಕ ಪಡೆಯ ಕಾರ್ಯಾಚರಣೆಗೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅಗ್ನಿ ಶಾಮಕ ಠಾಣಾಧಿಕಾರಿ ವಿ ಸುಂದರ್, ಪ್ರಮುಖ ಅಗ್ನಿಶಾಮಕ ಸುಂದರ್ ಬಿ, ಸಹಾಯಕ ಠಾಣಾಧಿಕಾರಿ ಖಾಜಾ ಹುಸೇನ್, ಡ್ರೈವರ್ ಸಚಿನ್, ದೀಪಕ್, ಅಗ್ನಿಶಾಮಕ ಸಮೀರ್ ಅವರ ಒಳಗೊಂಡ ತಂಡ ಮೃತ ದೇಹವನ್ನು ಹೊರಕ್ಕೆ ತೆಗೆಯುವಲ್ಲಿ ಶ್ರಮವಹಿಸಿದ್ದಾರೆ.