ನ್ಯೂಸ್ ನಾಟೌಟ್: ಅಪಘಾತವೊಂದರಲ್ಲಿ ಗಾಯಗೊಂಡ ಮಹಿಳೆಯನ್ನು ಸರಿಯಾದ ಸಮಯಕ್ಕೆ ಮಹಿಳಾ ಠಾಣೆಯ ಎಸ್.ಐಯೊಬ್ಬರು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಪಡೀಲ್ ಎಂಬಲ್ಲಿ ನಡೆದಿದೆ.
ಏನಿದು ಘಟನೆ?
ಕುಸುಮಾವತಿ ಎಂಬವರು ಕೆಲಸ ನಿಮಿತ್ತ ಅಟೋ ರಿಕ್ಷಾದಲ್ಲಿ ಪಡೀಲ್ ಕಡೆ ಪ್ರಯಾಣಿಸುತ್ತಿದ್ದರು.ಇದೇ ವೇಳೆ ತಾನು ಪ್ರಯಾಣಿಸುತ್ತಿದ್ದ ಅಟೋ ರಿಕ್ಷಾ ಪಲ್ಟಿ ಹೊಡೆದಿದೆ. ಕುಸುಮಾವತಿಯರು ಗಾಯಗೊಂಡಿದ್ದರು.ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಪುತ್ತೂರು ಮಹಿಳಾ ಠಾಣೆಯ ಎಸ್.ಐ ಶೇಷಮ್ಮ ರವರು ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿ ರಾಧಾಕೃಷ್ಣ ಜೆ.ಬಿ. ರವರು ಕೂಡಲೇ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎಸ್.ಐ ಕಾರ್ಯಕ್ಕೆ ಶ್ಲಾಘನೆ :
ಪೊಲೀಸ್ ಜೀಪ್ ನಲ್ಲಿಯೇ ಗಾಯಗೊಂಡ ಮಹಿಳೆಯನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಎಸ್.ಐ ಶೇಷಮ್ಮ ರವರ ಈ ಮಾನವೀಯತೆ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ. ಎಲ್ಲೆಡೆ ಶ್ಲಾಘನಾರ್ಹ ಮಾತುಗಳು ಕೇಳಿ ಬಂದಿದೆ.