Latestಕೆವಿಜಿ ಕ್ಯಾಂಪಸ್‌

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು 2024-25ನೇ ಸಾಲಿನ ವೈದ್ಯಕೀಯ ಸ್ನಾತಕೋತ್ತರ ಮತ್ತು ವೈದ್ಯಕೀಯ ಪದವಿ ವಿಭಾಗದ ಫಲಿತಾಂಶ ಪ್ರಕಟ, ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ 8 ರ‍್ಯಾಂಕ್‌

659

ನ್ಯೂಸ್ ನಾಟೌಟ್ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು 2024-25ನೇ ಸಾಲಿನ ವೈದ್ಯಕೀಯ ಸ್ನಾತಕೋತ್ತರ ಪದವಿ ಮತ್ತು ವೈದ್ಯಕೀಯ ಪದವಿ ವಿಭಾಗಗಳ ರ‍್ಯಾಂಕ್‌ ಪಟ್ಟಿ ಪ್ರಕಟಿಸಿದ್ದು, ಕಾಲೇಜಿನ ವಿದ್ಯಾರ್ಥಿಗಳು ಒಟ್ಟು 8 ರ‍್ಯಾಂಕ್‌ಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸ್ನಾತಕೋತ್ತರ ಪದವಿಯ ತುರ್ತು ವೈದ್ಯಕೀಯ ವಿಭಾಗದಲ್ಲಿ ಡಾ. ಕಿರಣ್ ತಟ್ಟಿ 3ನೇ ರ‍್ಯಾಂಕ್‌ ಮತ್ತು ಡಾ. ಸ್ನೇಹಿತ್ ಸಿ. ಪಾಟೀಲ್ 8ನೇ ರ‍್ಯಾಂಕ್‌ ಪಡೆದುಕೊಂಡಿರುತ್ತಾರೆ. ಇವರು ತುರ್ತು ವೈದ್ಯಕೀಯ ವಿಭಾಗದ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳು.

ವೈದ್ಯಕೀಯ ಪದವಿ ವಿಭಾಗದಲ್ಲಿ ನಿತಿನ್ ದ್ವಿವೇದಿ ತೃತೀಯ ಎಂ.ಬಿ.ಬಿ.ಎಸ್.ನಲ್ಲಿ 4ನೇ ರ‍್ಯಾಂಕ್‌, ಜೀವರಾಸಾಯನ

ಶಾಸ್ತ್ರ ವಿಭಾಗದಲ್ಲಿ 1ನೇ ರ‍್ಯಾಂಕ್‌, ನ್ಯಾಯ ವೈದ್ಯಶಾಸ್ತ್ರ ವಿಭಾಗದಲ್ಲಿ 4ನೇ ರ‍್ಯಾಂಕ್ ಹಾಗೂ ಸಮುದಾಯ ವಿಜ್ಞಾನ ಶಾಸ್ತ್ರದಲ್ಲಿ 3ನೇ ರ‍್ಯಾಂಕ್‌ ಪಡೆದುಕೊಂಡಿರುತ್ತಾರೆ. ಕನಿಕಾ ಸಿಹಾಗ್ ನ್ಯಾಯ ವೈದ್ಯಶಾಸ್ತ್ರ ವಿಭಾಗದಲ್ಲಿ 8ನೇ ರ‍್ಯಾಂಕ್‌

ಮತ್ತು ಇಶು ಬಿರ್ಹ್ಮನ್, ಸ್ತ್ರೀ ರೋಗ ಮತ್ತು ಪ್ರಸೂತಿ ಚಿಕಿತ್ಸಾ ಶಾಸ್ತ್ರ ವಿಭಾಗದಲ್ಲಿ 6ನೇ ರ‍್ಯಾಂಕ್‌ ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಡೀನ್, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

See also  ಶಾಲೆಯಲ್ಲಿ ಮಕ್ಕಳು ಟಾಯ್ಲೆಟ್ ಕ್ಲೀನ್ ಮಾಡಿದ್ರೆ ಶಿಕ್ಷಕರ ಮೇಲಾಗಲಿದೆ ಕೇಸ್‌!!ಶಿಕ್ಷಣ ಇಲಾಖೆ ಆದೇಶದಲ್ಲೇನಿದೆ?
  Ad Widget   Ad Widget   Ad Widget   Ad Widget   Ad Widget   Ad Widget   Ad Widget