Latestಕೆವಿಜಿ ಕ್ಯಾಂಪಸ್‌

ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ 2024-25ನೇ ಸಾಲಿನ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ ನ ಫಲಿತಾಂಶ ಪ್ರಕಟ, ಸುಳ್ಯದ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಪ್ ಹೆಲ್ತ್ ಸೈನ್ಸಸ್ ಗೆ 7 ರ‍್ಯಾಂಕ್‌

565

ನ್ಯೂಸ್ ನಾಟೌಟ್: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು 2024-25ರ ಸಾಲಿನ ಅಲೈಡ್ ಹೆಲ್ತ್ ಸೈನ್ಸಸ್ ಕೋರ್ಸ್ ನ ರ‍್ಯಾಂಕ್‌ ಪಟ್ಟಿ ಪ್ರಕಟಿಸಿದ್ದು, ಸುಳ್ಯದ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಪ್ ಹೆಲ್ತ್ ಸೈನ್ಸಸ್ ಗೆ 7 ರ‍್ಯಾಂಕ್‌ ಲಭಿಸಿದೆ.

ಎಮರ್ಜೆನ್ಸಿ ಮೆಡಿಸಿನ್ ಮತ್ತು ಟ್ರಾಮ ಕೇರ್ ಟೆಕ್ನಾಲಜಿ ವಿಭಾಗದ ಅರ್ಚನಾ ಎನ್.ಕೆ. ಪ್ರಥಮ ರ‍್ಯಾಂಕ್‌, ದ್ವಿತೀಯ ಬಿ.ಎಸ್ಸಿ.ಯಲ್ಲಿ 1ನೇ ರ‍್ಯಾಂಕ್‌ ಮತ್ತು ತೃತೀಯ ಬಿ.ಎಸ್ಸಿ.ಯಲ್ಲಿ 2ನೇ ರ‍್ಯಾಂಕ್‌ ಪಡೆದುಕೊಂಡಿರುತ್ತಾರೆ.

ಎಮರ್ಜೆನ್ಸಿ ಮೆಡಿಸಿನ್ ಮತ್ತು ಟ್ರಾಮ ಕೇರ್ ಟೆಕ್ನಾಲಜಿ ವಿಭಾಗದ ಅಂಜಲ, ದ್ವಿತೀಯ ಬಿ.ಎಸ್ಸಿ.ಯಲ್ಲಿ 2ನೇ ರ‍್ಯಾಂಕ್‌ ಮತ್ತು ತೃತೀಯ ಬಿ.ಎಸ್ಸಿ.ಯಲ್ಲಿ 4ನೇ ರ‍್ಯಾಂಕ್‌ ಪಡೆದುಕೊಂಡಿರುತ್ತಾರೆ. ಮೆಡಿಕಲ್ ಲ್ಯಾಬೋರೆಟರಿ ಟೆಕ್ನಾಲಜಿ ವಿಭಾಗದ ಭೂಮಿಕಾ ಕೆ., ಪ್ರಥಮ ಬಿ.ಎಸ್ಸಿ.ಯಲ್ಲಿ 10ನೇ ರ‍್ಯಾಂಕ್‌  ಮತ್ತು ದ್ವಿತೀಯ ಬಿ.ಎಸ್ಸಿ.ಯಲ್ಲಿ 9ನೇ ರ‍್ಯಾಂಕ್‌ ಪಡೆದುಕೊಂಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಡೀನ್, ಪ್ರಾಂಶುಪಾಲರು ಮತ್ತು ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

See also  ಭೂಕುಸಿತಕ್ಕೆ 3 ಭಾರತೀಯ ಸೈನಿಕರು ಬಲಿ..! 6 ಯೋಧರು ನಾಪತ್ತೆ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget