ಕ್ರೈಂ

ಆತ್ಮಹತ್ಯೆಗೆ ಶರಣಾದ ನಿವೃತ್ತ ನ್ಯಾಯಾಧೀಶ

417

ನ್ಯೂಸ್ ನಾಟೌಟ್: ನಿವೃತ್ತ ಜಡ್ಜ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಾನಪ್ಪ ತಳವಾರ (53) ನಿವೃತ್ತ ಜಡ್ಜ್ ಆಗಿದ್ದಾರೆ.

ಮೂಲತಃ ಶೆಲ್ಲಿಕೇರಿ ಗ್ರಾಮದವರಾಗಿದ್ದ ಮಾನಪ್ಪ ತಳವಾರ ಬಾಗಲಕೋಟೆಯ ನವನಗರದ ಮನೆಯಲ್ಲಿ ವಾಸವಾಗಿದ್ದು ಅವರೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಸಿಪಿಐ ವಿಜಯಕುಮಾರ್ ಮುರಗುಂಡಿ, ಸಿಪಿಐ ಎಸ್.ಎಂ.ಆವಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ನವನಗರ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಮಾನಪ್ಪ ತಳವಾರ ಕಳೆದ ಮೂರು ವರ್ಷದಿಂದ ಕಡ್ಡಾಯ ನಿವೃತ್ತಿ ಮೇಲಿದ್ದರು. ಮೃತ ಜಡ್ಜ್ ಗೆ ಇಬ್ಬರು ಪತ್ನಿಯರು ಇದ್ದಾರೆ. ಮೊದಲ ಪತ್ನಿ ಬೆಂಗಳೂರಲ್ಲಿ ಜಡ್ಜ್ ಆಗಿದ್ದಾರೆ. ಎರಡನೇ ಪತ್ನಿ ಜೊತೆ ನವನಗರದಲ್ಲಿ ಮಾನಪ್ಪ ತಳವಾರ ನೆಲೆಸಿದ್ದರು. ಎರಡನೇ ಮದುವೆ ಆದ ಹಿನ್ನೆಲೆ ಪನಿಷ್ಮೆಂಟ್ ನಿವೃತ್ತಿ ಪಡೆದಿದ್ದರು

See also  2 ವರ್ಷದ ಪ್ರೀತಿ 2 ನಿಮಿಷದಲ್ಲಿ ದುರಂತ ಅಂತ್ಯ..! ಯುವತಿಯನ್ನು ಕೊಂದು ಮಣ್ಣಲ್ಲಿ ಹೂತಿಟ್ಟ ಯುವಕ..!
  Ad Widget   Ad Widget     Ad Widget   Ad Widget   Ad Widget   Ad Widget