ವೈರಲ್ ನ್ಯೂಸ್

ನಿವೃತ್ತ ಐಎಎಸ್ ಅಧಿಕಾರಿಗೆ ಹಿಗ್ಗಾಮುಗ್ಗಾ ಥಳಿಸಿದ ಬಸ್ ಕಂಡೆಕ್ಟರ್, 10 ರೂ. ವಿಚಾರದಲ್ಲಿ ವೃದ್ದನೆಂದು ನೋಡೆದ ಥಳಿಸಿದ ಪಾಪಿ..!

146

ನ್ಯೂಸ್ ನಾಟೌಟ್: ವ್ಯಕ್ತಿಗೆ ಮರ್ಯಾದೆ ಕೊಡದಿದ್ದರೂ ಪರವಾಗಿಲ್ಲ ಆತನ ವಯಸ್ಸು ಹಾಗೂ ಅನುಭವಕ್ಕೆ ಬೆಲೆ ಕೊಡಬೇಕಾಗುತ್ತದೆ. ಆದರೆ ಇಲ್ಲೊಬ್ಬ ಬಸ್ ಕಂಡಕ್ಟರ್ ಕೇವಲ 10 ರೂ. ವಿಚಾರದಲ್ಲಿ ನಿವೃತ್ತ ಐಎಎಸ್ ಅಧಿಕಾರಿಯ ಮೇಲೆಯೇ ಹಲ್ಲೆ ಮಾಡಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಈತ ಹಲ್ಲೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಿವೃತ್ತ ಅಧಿಕಾರಿ ಆರ್‌ಎಲ್ ಮೀನಾ ಅವರು ಆಗ್ರಾ ರಸ್ತೆಯಲ್ಲಿರುವ ಕನೋಟಾ ಬಸ್ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ ಮೀನಾ ಅವರಿಗೆ ಬಸ್ ನಿಲ್ದಾಣದ ಅರಿವಿಲ್ಲದೆ ಇಳಿಯಲಿಲ್ಲ ಬದಲಾಗಿ ಮುಂದಿನ ನಿಲ್ದಾಣವಾದ ನೈಲಾದಲ್ಲಿ ಇಳಿಯಲು ಯತ್ನಿಸಿದ್ದಾರೆ ಈ ವೇಳೆ ಬಸ್ ಕಂಡಕ್ಟರ್ ಹೆಚ್ಚುವರಿ 10 ರೂ. ನೀಡುವಂತೆ ಹೇಳಿದ್ದಾರೆ ಇದಕ್ಕೆ ಮೀನಾ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ ಜೊತೆಗೆ ಕಂಡಕ್ಟರ್ ನಿವೃತ್ತ ಅಧಿಕಾರಿಯನ್ನು ಮೊದಲು ತಳ್ಳಿದ್ದಾರೆ ಇದರಿಂದ ಕೋಪಗೊಂಡ ನಿವೃತ್ತ ಅಧಿಕಾರಿ ಕಂಡಕ್ಟರ್ ಗೆ ಕಪಾಳಮೋಕ್ಷ ಮಾಡಿದ್ದಾರೆ ಇದರಿಂದ ಸಿಟ್ಟಿಗೆದ್ದ ಕಂಡಕ್ಟರ್ ನಿವೃತ್ತ ಅಧಿಕಾರಿಯ ಮೇಲೆ ಮನಬಂದಂತೆ ಥಳಿಸಿದ್ದಾರೆ.

See also  SBI ಬ್ಯಾಂಕ್ ನಲ್ಲಿ 269 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಲ್ಲಿದೆ ಸಂಪೂರ್ಣ ಮಾಹಿತಿ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget