ನ್ಯೂಸ್ ನಾಟೌಟ್: ಸಿಂಗಾಪೂರದ ಮಹಿಳಾ ಉದ್ಯೋಗಿಯೊಬ್ಬರು ಟಾಯ್ಲೆಟ್ ಪೇಪರ್ ಮೇಲೆ ತಮ್ಮ ರಾಜೀನಾಮೆ ಬರೆದು ಉದ್ಯೋಗವನ್ನು ತೊರೆದಿದ್ದಾರೆ. ಈ ರಾಜೀನಾಮೆ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಖಾಸಗಿ ಕಂಪನಿ ನಿರ್ದೇಶಕಿ ಏಂಜೆಲಾ ಯೋಹ್ ಎಂಬವರು ಲಿಂಕ್ಡ್ ಇನ್ ಪೋಸ್ಟ್ ನಲ್ಲಿ ಉದ್ಯೋಗಿಯೊಬ್ಬರು ಟಾಯ್ಲೆಟ್ ಪೇಪರ್ ಮೇಲೆ ರಾಜೀನಾಮೆ ಬರೆದು ಸಲ್ಲಿಸಿದ ಫೋಟೋವನ್ನು ಹಂಚಿಕೊಂಡಿದ್ದಾರೆ.
ಈ ರಾಜೀನಾಮೆ ಪತ್ರ ನನ್ನ ಮನಸ್ಸಿನಲ್ಲಿ ಇನ್ನೂ ಹಾಗೇ ಅಚ್ಚೊತ್ತಿದೆ. ಉದ್ಯೋಗಿಗಳನ್ನು ಈ ರೀತಿ ಕೆಟ್ಟದಾಗಿ ನಡೆಸಿಕೊಳ್ಳಬೇಡಿ ಎಂದಿದ್ದಾರೆ.
महिला ने टॉयलेट पेपर पर लिखा इस्तीफा
‘मैंने खुद को टॉयलेट पेपर की तरह महसूस किया, जब जरूरत पड़ी, इस्तेमाल किया गया और फिर बिना सोचे-समझे फेंक दिया गया’ – ये एक कर्मचारी का इस्तीफा है, जो टॉयलेट पेपर पर लिखा गया था. सिंगापुर की बिजनेसवुमन एंजेला योह ने जब अपने कर्मचारी का ये… pic.twitter.com/3RaPQLxumX
— NDTV India (@ndtvindia) April 17, 2025
ವೈರಲ್ ಆಗಿರುವ ರಾಜೀನಾಮೆ ಪತ್ರದಲ್ಲಿ , “ಈ ಸಂಸ್ಥೆ ನನ್ನನ್ನು ಟಾಯ್ಲೆಟ್ ಪೇಪರ್ ಎಂದು ಭಾವಿಸಿದೆ, ಅಗತ್ಯವಿದ್ದಾಗ ಮಾತ್ರ ಬಳಸಿ, ಬೇರೆ ಸಂದರ್ಭದಲ್ಲಿ ಎರಡನೇ ಆಲೋಚನೆಯಿಲ್ಲದೆ ನನ್ನನ್ನು ಬಿಸಾಡಲಾಗಿದೆ. ಕಂಪನಿಯು ನನ್ನನ್ನು ಹೇಗೆ ನಡೆಸಿಕೊಂಡಿದೆ ಎಂಬುದರ ಸಂಕೇತವಾಗಿ ನಾನು ನನ್ನ ರಾಜೀನಾಮೆಗಾಗಿ ಈ ರೀತಿಯ ಕಾಗದವನ್ನು ಆಯ್ಕೆ ಮಾಡಿದ್ದೇನೆ. ನಾನು ನನ್ನ ಸ್ಥಾನವನ್ನು ತ್ಯಜಿಸುತ್ತಿದ್ದೇನೆ” ಎಂದು ಬರೆಯಲಾಗಿದೆ.