ನ್ಯೂಸ್ ನಾಟೌಟ್: ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾ ಸೇರಿದಂತೆ ಏಳು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ ಜಾಮೀನು ರದ್ದು ಮಾಡುವಂತೆ ಸರ್ಕಾರ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಹಲವು ಅಭಿಪ್ರಾಯಗಳನ್ನು ಹೊರಹಾಕಿದೆ. ಇಡೀ ಪ್ರಕರಣ ನಡೆಯಲು ನೀವೇ ಕಾರಣ ಅಲ್ಲವೇ ಎಂದು ಪವಿತ್ರಾಗೆ ನೇರವಾಗಿ ಕೇಳಿದೆ. ಸದ್ಯ ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ.
ವಿಶೇಷ ಅಂದ್ರೆ ಸುಪ್ರೀಂ ಕೋರ್ಟ್ ಪವಿತ್ರಗೌಡಗೆ ಸಂಬಂಧಿಸಿ ಕೆಲವು ಪ್ರಶ್ನೆಗಳನ್ನು ಮಾಡಿದೆ. ಪವಿತ್ರಾ ಗೌಡ ಅವರಿಂದಲೇ ಎಲ್ಲವೂ ಆಗಿದೆ. ಎಲ್ಲಾ ಸಮಸ್ಯೆಗೆ ಪವಿತ್ರಾ ಗೌಡನೇ ಕಾರಣ. ಹೈಕೋರ್ಟ್ ಮಾಡಿದ ತಪ್ಪನ್ನು ನಾವು ಮಾಡಲ್ಲ ಎಂದು ಸುಪ್ರೀಂ ಕೋರ್ಟ್ ಸೂಕ್ಷ್ಮವಾಗಿ ಹೇಳಿದೆ. ಇದರಿಂದ ಪ್ರಕರಣದ ಮೊದಲ ಆರೋಪಿ ಪವಿತ್ರಗೌಡಗೆ ಮತ್ತೆ ಸಂಕಷ್ಟ ಎದುರಾಗುವ ಲಕ್ಷಣಗಳು ಗೋಚರಿಸಿವೆ.
ಪವಿತ್ರಾ ಗೌಡ ದರ್ಶನ್ಗೆ 50 ಬಾರಿ ಕಾಲ್ ಮಾಡಿದ್ದು ಏಕೆ? ಪವಿತ್ರಾಗೌಡಗೆ ಮೊದಲ ಮದುವೆ ಡಿವೋರ್ಸ್ ಆಗಿದೆಯಾ? ಪವಿತ್ರಾಗೌಡ ಏನು ಮಾಡುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ. ಆಗ ಪವಿತ್ರಾಗೌಡ ಪರ ವಕೀಲರು ವಾದ ಮಂಡಿಸಿ, ಪವಿತ್ರಾಗೌಡ ಕಲಾವಿದೆ ಎಂದಿದ್ದಾರೆ. ಸದ್ಯ ವಾದ ಪ್ರತಿವಾದ ಆಲಿಸಿರುವ ಸುಪ್ರೀಂ ಕೋರ್ಟ್ ಮುಂದಿನ ವಾರ ತೀರ್ಪು ಪ್ರಕಟಿಸೋದಾಗಿ ಹೇಳಿದೆ. ಹೀಗಾಗಿ ಮುಂದಿನ ವಾರ ಪ್ರಕರಣದ 7 ಆರೋಪಿಗಳ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.