ಕರಾವಳಿ

ಪ್ರವೀಣ್ ಹತ್ಯೆ ಹಿನ್ನೆಲೆ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ

ನ್ಯೂಸ್ ನಾಟೌಟ್: ಹಿಂದೂ ಕಾರ್ಯಕರ್ತರ ಸರಣಿ ಸಾವಿನ ಹಿನ್ನೆಲೆಯಲ್ಲಿ ನಾನು ಬಿಜೆಪಿ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೆ ಸಿದ್ಧವಾಗಿದ್ದೇನೆ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಪದೇ ಪದೇ ಹಿಂದೂ ಯುವಕರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗುತ್ತಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸರಕಾರದ ಮಾದರಿಯಲ್ಲಿ ನಮ್ಮ ಸರಕಾರ ಕ್ರಮ ತೆಗೆಕೊಂಡರೆ ಮಾತ್ರ ಸರಕಾರ ಹಾಗೂ ಸಂಘದ ವರ್ಚಸ್ಸು ಉಳಿಯಲು ಸಾಧ್ಯ. ನಮ್ಮ ಕಾರ್ಯಕರ್ತರನ್ನು ನಮಗೆ ರಕ್ಷಿಸಲು ಸಾಧ್ಯವಾಗದಿದ್ದರೆ ನಾವು ಅಧಿಕಾರದಲ್ಲಿದ್ದು ಏನು ಪ್ರಯೋಜನ ಎಂದು ರೇಣುಕಾಚಾರ್ಯ ಜಾಲತಾಣದಲ್ಲಿ ತಿಳಿಸಿದ್ದಾರೆ. ಈಗಾಗಲೇ ಹಲವು ಕಡೆ ಹಲವಾರು ಬಿಜೆಪಿ ನಾಯಕರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ರೇಣುಕಾಚಾರ್ಯ ಇಂತಹದ್ದೊಂದು ಹೇಳಿಕೆ ನೀಡಿರುವುದು ಪಕ್ಷದೊಳಗೆ ಮತ್ತಷ್ಟು ಮುಜುಗರಕ್ಕೆ ಕಾರಣವಾಗಿದೆ.

Related posts

ಗೂನಡ್ಕದ ವಹೀದಾಗೆ ಕೆಪಿಸಿಸಿನಿಂದ ಮಹತ್ತರ ಜವಾಬ್ದಾರಿ, ಆದೇಶ ಹೊರಡಿಸಿದ ಡಿಕೆ ಶಿವಕುಮಾರ್

ಗೂಗಲ್ ಪೇ ಮೂಲಕ ಹಣ ಪಾವತಿಸಿ ಪ್ರಯಾಣಿಕರ ಕ್ಷಮೆ ಕೇಳಿದ ಕಂಡೆಕ್ಟರ್..!

ಮಂಗಳೂರು: ಯುವ ಉದ್ಯಮಿ ಕುಸುಮಾಧರ ಸೇರಿದಂತೆ 25 ಮಂದಿಗೆ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ