ಕರಾವಳಿಕ್ರೈಂವೈರಲ್ ನ್ಯೂಸ್ಸಿನಿಮಾ

ರೇಣುಕಾಸ್ವಾಮಿ ಕೊಲೆ ಕೇಸ್‌ ತನಿಖೆ ಮುಕ್ತಾಯ..! ಇಂದೇ(ಸೆ.4) ಕೋರ್ಟ್ ಗೆ ಚಾರ್ಜ್‌ಶೀಟ್‌ ಸಲ್ಲಿಕೆ..!

247

ನ್ಯೂಸ್ ನಾಟೌಟ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್‌ & ಟೀಂ ವಿರುದ್ಧ ಕೋರ್ಟ್‌ಗೆ ಇಂದೇ ಚಾರ್ಜ್‌ಶೀಟ್‌ ಸಲ್ಲಿಕೆಯಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮಧ್ಯಾಹ್ನದ ನಂತರ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಕೆಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್‌, ಬಸವೇಶ್ವರ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ ತನಿಖಾಧಿಕಾರಿಯಾಗಿರುವ ಎಸಿಪಿ ಭೇಟಿಗೆ ಆಗಮಿಸಿದ್ದಾರೆ.
ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಕೆಗೆ ತನಿಖಾಧಿಕಾರಿಗಳು ಡಿಸಿಪಿ ಅನುಮತಿ ಪಡೆದಿದ್ದಾರೆ. ತನಿಖಾಧಿಕಾರಿ, ಎಸ್‌ಪಿಪಿ ಮೂಲಕ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.

ಚಾರ್ಜ್ ಶೀಟ್ ಸಲ್ಲಿಕೆಯ ಬಗ್ಗೆ ದರ್ಶನ್ ನಿನ್ನೆ ಪೊಲೀಸ್ ಅಧಿಕಾರಿಗಳ ಬಳಿ ಮಾಹಿತಿ ಕೇಳಿದ್ದರು ಎನ್ನಲಾಗಿದೆ. ಇನ್ನು ಕೋರ್ಟ್ ನಲ್ಲಿ ಅಂತಿಮ ವಿಚಾರಣೆ ಮತ್ತು ತೀರ್ಪು ಆದಷ್ಟು ಶೀಘ್ರವೇ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

https://newsnotout.com/2024/09/central-govt-law-are-amandment-in-this-state-kannada-news/
See also  ಕಾಂಗ್ರೆಸ್ ಹೀಗೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡೇ ಬಿಟ್ಟಿ ಭಾಗ್ಯ ನೀಡಿದ್ರೆ ಕರ್ನಾಟಕ ಮುಂದೆ ಪಾಕಿಸ್ತಾನ, ಶ್ರೀಲಂಕಾ ಥರ ಬೀದಿಗೆ ಬೀಳುತ್ತೆ..ಕಾಂಗ್ರೆಸ್ ವಿರುದ್ಧ ಕುಟುಕಿದ ಸಂಸದ ನಳಿನ್ ಕುಮಾರ್ ಕಟೀಲ್
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget