Latestಕ್ರೈಂದೇಶ-ವಿದೇಶವೈರಲ್ ನ್ಯೂಸ್

ಬಾಡಿಗೆ ಮನೆ ಮಾಲಕಿ ಜೊತೆ ಅಕ್ರಮ ಸಂಬಂಧ..! ಬಾಡಿಗೆದಾರನನ್ನ ಜೀವಂತವಾಗಿ ಹೂತುಹಾಕಿದ ಆಕೆಯ ಪತಿ..!

1.2k
Spread the love

ನ್ಯೂಸ್‌ ನಾಟೌಟ್: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ವ್ಯಕ್ತಿಯನ್ನ ಪತ್ತೆಹಚ್ಚಿ,ಸ್ನೇಹಿತರ ಸಹಾಯದಿಂದ ಅಪಹರಿಸಿ ಬಳಿಕ ಹೊಲದಲ್ಲಿ 7 ಅಡಿ ಆಳದ ಗುಂಡಿಯಲ್ಲಿ ಜೀವಂತವಾಗಿ ಹೂತುಹಾಕಿದ ಘಟನೆ ಹರಿಯಾಣದ ರೋಹ್ಟಕ್‌ ನಲ್ಲಿ ನಡೆದಿದೆ.

ತನ್ನ ಮನೆಯ ಬಾಡಿಗೆ ಬಂದಿದ್ದ ವ್ಯಕ್ತಿ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದನ್ನು ಪತ್ತೆಹಚ್ಚಿದ ಚಂಡೀಗಢ ಮೂಲದ ಮನೆ ಮಾಲಿಕ, ಬಳಿಕ 7 ಅಡಿ ಗುಂಡಿ ತೆಗೆದು ಆತನನ್ನ ಸಜೀವವಾಗಿ ಹೂತುಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆ ಮಾಡಿದ ವ್ಯಕ್ತಿ ಓರ್ವ ಯೋಗ ಶಿಕ್ಷಕನಾಗಿದ್ದ ಎನ್ನಲಾಗಿದೆ.

ಕಳೆದ ವರ್ಷ ಡಿಸೆಂಬರ್‌ ನಲ್ಲಿ ಘಟನೆ ನಡೆದಿತ್ತು. ಪೊಲೀಸರು ಸುದೀರ್ಘ ತನಿಖೆ ಬಳಿಕ ಆರೋಪಿಯನ್ನ ಬಂಧಿಸಿದ್ದು, ಇದೀಗ ಶವವನ್ನ ಹೊರ ತೆಗೆದಿದ್ದಾರೆ ಎಂದು ವರದಿಗಳು ತಿಳಿಸಿವೆ.

ರೋಹ್ಟಕ್‌ ನ ಬಾಬಾ ಮಸ್ತನಾಥ್ ವಿಶ್ವವಿದ್ಯಾನಿಲಯದಲ್ಲಿ ಯೋಗ ಕಲಿಸುತ್ತಿದ್ದ ಜಗದೀಪ್ ತನ್ನ ಮನೆಯ ಒಂದು ಭಾಗವನ್ನು ಹರ್ದೀಪ್ ಎಂಬಾತನಿಗೆ ಬಾಡಿಗೆ ನೀಡಿದ್ದ. ಆದರೆ, ಬಾಡಿಗೆ ಮನೆಯಲ್ಲಿದ್ದ ಹರ್ದೀಪ್‌ ಆತನ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇದನ್ನು ಪತ್ತೆಹಚ್ಚಿದ ಜಗದೀಪ್‌, ತನ್ನ ಸ್ನೇಹಿತರ ಸಹಾಯ ಪಡೆದು ಕೊಲೆ ಮಾಡುವ ಸ್ಕೆಚ್‌ ಹಾಕಿದ್ದಾನೆ. ಚರ್ಖಿ ದಾದ್ರಿಯ ಪಂತವಾಸ್ ಗ್ರಾಮದಲ್ಲಿ 7 ಅಡಿ ಆಳದ ಗುಂಡಿ ತೆಗೆಸಿದ್ದಾನೆ. ಗುಂಡಿ ತೆಗೆಯುವವರು ಮೊದಲು ಕಾರಣ ಕೇಳಿದಾಗ ಇದು ಬೋರ್‌ ವೆಲ್‌ ಗೆ ಅಂದಿದ್ದಾನೆ. ಬಳಿಕ ಸ್ನೇಹಿತರ ಸಹಾಯದಿಂದ ಹರ್ದೀಪ್‌ ನ ಕೈಕಾಲುಗಳನ್ನು ಕಟ್ಟಿಹಾಕಿ, ಬಾಯಿಗೆ ಟೇಪ್‌ ತುರುಕಿ ಜೀವಂತವಾಗಿ ಹೂತುಹಾಕಿದ್ದಾನೆ.

ಕೊಲೆಯಾದ 10 ದಿನಗಳ ಬಳಿಕ ಜ.3ರಂದು ಶಿವಾಜಿ ಕಾಲೋನಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈ ಸಂಬಂದ ತನಿಖೆ ಕೈಗೊಂಡಿದ್ದ ಪೊಲೀಸರು ಜದೀಪ್‌ ದೂರವಾಣಿ ಕರೆಗಳನ್ನು ಪರಿಶೀಲಿಸಿದ ಬಳಿಕ ನಿಜಾಂಶ ಬಯಲಾಗಿದೆ. ಬಳಿಕ ಮನೆ ಮಾಲಿಕ ಜಗದೀಪ್‌ ನನ್ನ ಕೋರ್ಟ್‌ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿಸಿರುವ ಪೊಲೀಸರು, ಕೊಲೆಗೆ ಸಹಕಾರ ನೀಡಿದ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿಹುಡುಗಿಯನ್ನು ಹೊಗಳುವ ಭರದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅಪಮಾನ..! ರಕ್ಷಕ್ ಬುಲೆಟ್‌ ವಿರುದ್ಧ ದೂರು..!

See also  ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಿದ್ದರಾಮಯ್ಯ!
  Ad Widget   Ad Widget   Ad Widget   Ad Widget   Ad Widget   Ad Widget