ನ್ಯೂಸ್ ನಾಟೌಟ್: ಮಂಗಳೂರಿನ ಪಂಪ್‌ವೆಲ್ ಸಮೀಪದ ರಾಷ್ಟ್ರೀಯ 75ರ ನಾಗುರಿ ಎಂಬಲ್ಲಿ ಕಳೆದ ನವೆಂಬರ್ 19ರಂದು ಸಂಜೆ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿಯ ಕುಟುಂಬಕ್ಕೆ ಗುರು ಬೆಳದಿಂಗಳು ಫೌಂಡೇಶನ್ ವತಿಯಿಂದ ನಿರ್ಮಿಸಿದ ನವೀಕೃತ ಮನೆಯ ಹಸ್ತಾಂತರ ಕಾರ್ಯಕ್ರಮ ಬುಧವಾರ ಬೆಳಗ್ಗೆ ನಡೆಯಿತು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಅವರ ನೇತೃತ್ವದಲ್ಲಿ ಗುರು ಬೆಳದಿಂಗಳು ಫೌಂಡೇಶನ್ ವತಿಯಿಂದ 6 ಲಕ್ಷ ರೂ. ವೆಚ್ಚದಲ್ಲಿ ನವೀಕರಿಸಲಾದ ಮನೆಯನ್ನು ಯುಗಾದಿ ಹಬ್ಬದ ಕೊಡುಗೆಯಾಗಿ ಪುರುಷೋತ್ತಮ ಪೂಜಾರಿ ಹಾಗೂ ಕುಟುಂಬದ ಸದಸ್ಯರು, ಸಂಬಂಧಿಕರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.
ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಗುರು ಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್., ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕ ಫಾ.ಜೆ.ಬಿ.ಕ್ರಾಸ್ತಾ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಉದ್ಯಮಿಗಳಾದ ರೋಹನ್ ಮೊಂತೆರೋ, ರಘುನಾಥ್ ಮಾಬೆನ್, ಧರ್ಮರಾಜ ಅಮ್ಮುಂಜೆ, ಕಾರ್ಪೊರೇಟರ್ ಪುವೀಣ್ ಚಂದ್ರ ಆಳ್ವ, ಮಾಜಿ ಕಾರ್ಪೊರೇಟರ್ ಡಿ.ಕೆ.ಅಶೋಕ್ ಕುಮಾರ್, ಇಂಡಿಯಾನ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ, ಸತ್ಯಜಿತ್ ಸುರತ್ಕಲ್, ಪ್ರಮುಖರಾದ ದೇವೇಂದ್ರ ಪೂಜಾರಿ, ಮೋಹನ್ ನೆಕ್ಕರೆಮಾರು, ಸೂರ್ಯಕಾಂತಿ ಸುವರ್ಣ, ಆಲ್ವಿನ್ ಪ್ರಕಾಶ್, ನಾಗವೇಣಿ, ಹಿತಾ ಪ್ರವೀಣ್ ಕುಮಾರ್, ಶೈಲೇಂದ್ರ ಸುವರ್ಣ, ರೋಹಿತ್ ಕುವೈತ್, ಜಯಾನಂದ ಪೂಜಾರಿ, ರಾಜೇಶ್ ಬಿ., ಪ್ರವೀಣ್ ಕುಮಾರ್, ಪ್ರಶಾಂತ್ ಸುವರ್ಣ ಹಾಗೂ ಗುರುಬೆಳದಿಂಗಳು ಫೌಂಡೇಶನ್‌ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.