ಸುಳ್ಯ

ಕಾಡಾನೆ ದಾಳಿಗೆ ಇಬ್ಬರು ಪ್ರಾಣ ಕಳೆದುಕೊಂಡಿದ್ದ ರೆಂಜಿಲಾಡಿಯಲ್ಲೀಗ ಮತದಾನ ಬಹಿಷ್ಕಾರದ ಬ್ಯಾನರ್!

ನ್ಯೂಸ್‌ನಾಟೌಟ್‌:  ಕಾಡಾನೆ ದಾಳಿಯಿಂದ ರೆಂಜಿಲಾಡಿ ಹಾಲು ಸೊಸೈಟಿ ಉದ್ಯೋಗಿದ್ದ ರಂಜಿತಾ ಮತ್ತು ರಕ್ಷಿಸಲು ಬಂದಿದ್ದ ರಮೇಶ್ ಎಂಬ ಈ ಗ್ರಾಮದ ನಿವಾಸಿಗಳಿಬ್ಬರು ಮೃತಪಟ್ಟು ದೇಶದೆಲ್ಲೆಡೆ ಸುದ್ದಿಯಾಗಿತ್ತು. ಈ ಬಗ್ಗೆ ಸಮರ್ಪಕ ಶಾಶ್ವತ ಪರಿಹಾರ ಒದಗಿಸದ ಜನ ಪ್ರತಿನಿಧಿಗಳ ವಿರುದ್ಧ ಜನರು ಆಕ್ರೋಶಗೊಂಡಿದ್ದು, ರೆಂಜಿಲಾಡಿ ಗ್ರಾಮದಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವುದಾಗಿ ಮಾರ್ಚ್ 20 ರಂದು ವರದಿ ತಿಳಿಸಿದೆ.

ಈ ಬ್ಯಾನರನ್ನು  ಬಾಂತಾಜೆ ಸಂಪರ್ಕ ರಸ್ತೆಯಲ್ಲಿ ಅಳವಡಿಸಿದ್ದು, ಈ ಮೂಲಕ ತಮ್ಮ ವಿರೋಧವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದು, ಕಡಬ ತಾಲೂಕಿನ  ರೆಂಜಿಲಾಡಿ ಗ್ರಾಮ ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲಿದ್ದು ಇಲ್ಲಿನ  ಖಂಡಿಗ, ಪಿಲಿಂಗಲ್ಲು, ಕಾನೋಳಿ, ಬಾಂತಾಜೆ ರಸ್ತೆಯು ಸುಮಾರು  45 ಕ್ಕೂ ಹೆಚ್ಚಿನ ಮನೆಗಳಿಗೆ ಈ ಆನೆ ದಾಳಿಯ ಭೀತಿ ಕಾಡುತ್ತಿದೆ. 

ಇಲ್ಲಿಗೆ ಸಮರ್ಪಕ ರಸ್ತೆ ಅಬಿವೃದ್ದಿಗಾಗಿ  ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಆದುದರಿಂದ ಆನೆ ದಾಳಿಗೆ ಶಾಶ್ವತ ಪರಿಹಾರ ಒದಗಿಸಿ, ರಸ್ತೆ ರಸ್ತೆ ಸಂಪರ್ಕ ಒದಗಿಸುವ ವರೆಗೂ ಮುಂದಿನ ಎಲ್ಲಾ ಚುನಾವಣೆಗಳ ಮತದಾನವನ್ನು ಬಹಿಷ್ಕಾರಿಸಲು ಒಮ್ಮತದಿಂದ ತೀರ್ಮಾನಿಸಿರುವುದಾಗಿ ಬ್ಯಾನರ್ ನಲ್ಲಿ ಉಲ್ಲೇಖಿಸಲಾಗಿದೆ.

Related posts

Gruha Jyothi Scheme:ಗೃಹಜ್ಯೋತಿ ಯೋಜನೆಯ ಫ್ರೀ ವಿದ್ಯುತ್ ನಿರೀಕ್ಷೆಯಲ್ಲಿದ್ದವರಿಗೆ ಕರೆಂಟ್ ಶಾಕ್ ..!,ಬೆಸ್ಕಾಂ ಸಿಬ್ಬಂದಿ ಕರೆಂಟ್ ಬಿಲ್ ನೀಡಿದಾಗಲೇ ಗೊತ್ತಾಯ್ತು ಅಸಲಿ ವಿಚಾರ..!

ಸುಳ್ಯ: ಕಾರು- ಗ್ಯಾಸ್ ಲಾರಿ‌ ನಡುವೆ ಅಪಘಾತ, ತಡರಾತ್ರಿ ನಡೆದ ದುರ್ಘಟನೆ

ಪುತ್ತೂರು:ಬಿಜೆಪಿ ನಾಯಕರ ವಿರುದ್ಧ ಬ್ಯಾನರ್, ಚಪ್ಪಲಿ ಹಾರ!,ಮುಗಿಲು ಮುಟ್ಟಿದ ಕಾರ್ಯಕರ್ತರ ಆಕ್ರೋಶ